ಚಾಮರಾಜನಗರ: ಪ್ರಸಿದ್ಧ ಪ್ರವಾಸಿ ತಾಣವಾದ ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನ ಬೆಟ್ಟದ ಮುಖ್ಯ ರಸ್ತೆಯಲ್ಲಿ ಸಲಗವೊಂದು ದಿಢೀರ್ ಎಂಟ್ರಿ ಕೊಟ್ಟು ಜನರನ್ನು ಆತಂಕಕ್ಕೆ ಈಡು ಮಾಡಿದೆ.
ಬಿಳಿಗಿರಿರಂಗನಾಥ ಬೆಟ್ಟದ ಬಂಗ್ಲೆ ಪೋಡು, ಐಬಿ ಬಳಿ ಆನೆ ದಿಢೀರ್ ಪ್ರತ್ಯಕ್ಷವಾಗಿ ಓಡಾಡಿ ಸ್ಥಳೀಯರಿಗೆ ಆತಂಕ ಉಂಟು ಮಾಡಿದೆ. ಹಲಸಿನ ಆಸೆಗೆ ಆನೆ ಪೋಡುಗಳತ್ತ ಬರುತ್ತಿದ್ದು ಕೆಲವು ದಿನಗಳ ಹಿಂದೆಯಷ್ಟೇ ಇದೇ ರಸ್ತೆಯಲ್ಲಿ ಬಸ್ ನ್ನು ಕೂಡ ಹಿಮ್ಮೆಟ್ಟಿಸಿತ್ತು. ಈಗ ಮತ್ತೇ ಪೋಡುಗಳತ್ತ ಬಂದು ಸ್ಥಳೀಯರಿಗೆ ಭೀತಿ ಹುಟ್ಟಿಸಿದೆ.
ಇನ್ನು ಕೆ.ಗುಡಿ ಜಂಗಲ್ ರೆಸ್ಸಾರ್ಟ್ಗೆ ಏಕಾಏಕಿ ಬಾರಿ ಗಾತ್ರದ ಕಾಡಮ್ಮೆಯೊಂದು ದಿಢೀರನೆ ಬಂದು ಕೆಲಕಾಲ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ದಿನನಿತ್ಯ ಜಿಂಕೆ ನವಿಲು ಸಾಕಾನೆ ನೋಡುತ್ತಿದ್ದ ಪ್ರವಾಸಿಗರಿಗೆ ಇಂದು ಏಕಾಏಕಿ ಕಾಡಮ್ಮೆ ಎಂಟ್ರಿಯಿಂದ ಕೆಲ ಹೊತ್ತು ಆತಂಕಕ್ಕಿಡಾಗುವ ಪರಿಸ್ಥಿತಿ ನಿರ್ಮಾಣವಾಗಿ ಎಲ್ಲ ರೆಸ್ಸಾರ್ಟ್ ಸೇರುವಂತ್ತಾಗಿದೆ. ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

