ಚಾಮರಾಜನಗರ: ಸಿಟಿ ರವಿ ವಿರುದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದು,  ಸಿಟಿ ರವಿಗೆ ಜಾತಿ ಧರ್ಮದ ವಿಚಾರದಲ್ಲಿ ಬರಿ ಸಿಟಿ ಹೊಡೆಯುವುದೊಂದೆ ಅವರ ಅಭ್ಯಾಸ- ಕೆಟ್ಟಗುಣ ಎಂದರು. ನಾವು ಭಾರತೀಯರು ಯಾರೊ ಪಾಕಿಸ್ಥಾನ್ ಜಿಂದಾಬಾದ್ ಅಂದ್ರೆ ನಾವು ಒಪ್ಪೊಕೆ ಆಗೋಲ್ಲ ಎಂದರು.

ಇಡಿ ರಾಜ್ಯದಲ್ಲಿ ಸಂವಿಧಾನ ಪೀಠಿಕೆ ತಂದಿದ್ದು ನಮ್ಮ ಸಿದ್ದರಾಮಯ್ಯ ಸರ್ಕಾರ. ಧಾರ್ಮಿಕ ಕ್ಷೇತ್ರ ಅಂದ ತಕ್ಷಣ ಬರಿ ಬೆಂಕಿ ಹಚ್ಚೊದಲ್ಲ, ಬಿಜೆಪಿಯವರಿಗೆ ಮಾಡೋಕೆ ಏನು ಕೆಲಸ ಇಲ್ಲ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಕಟ್ಟಡ ಶಿಕ್ಷಕರ ವಿಚಾರದಲ್ಲಿ ಸಮಸ್ಯೆ ಇರೋದು ಸತ್ಯ ಎಂದರು.

ಎಲ್ಲಾ ಸಮಸ್ಯೆಗಳನ್ನ ಬಗೆಹರಿಸುವ ಕೆಲಸವನ್ನ ನಮ್ಮ ಸಿದ್ದರಾಮಯ್ಯ ಸರ್ಕಾರ ಮಾಡುತ್ತೆ, ಮೂರು ಹಂತಗಳಲ್ಲಿ ಶಿಕ್ಷಣ ಇಲಾಖೆಯಲ್ಲಿರುವ ಎಲ್ಲ ಸಮಸ್ಯೆಯನ್ನ ಬಗೆಹರಿಸುತ್ತೇವೆ ಎಂದು ಚಾಮರಾಜನಗರದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಫ ಹೇಳಿಕೆ ನೀಡಿದರು.