ಚಾಮರಾಜನಗರ: ನಗರದ ಸುಲ್ತಾನ್ ಶರೀಫ್ ವೃತ್ತದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಚಕ್ರ ಬೈಕ್ ಮೇಲೆ ಹರಿದ ಪರಿಣಾಮ ದಲಿತ ಸಂಘರ್ಷ ಸಮಿತಿ ಸಂಯೋಜಕ ಕೆಂಪನಪುರ ಗ್ರಾಮದ ಕೆ.ಎಂ.ನಾಗರಾಜು(60) ಮೃತಪಟ್ಟಿದ್ದಾರೆ.

ಗುಂಡ್ಲುಪೇಟೆ ರಸ್ತೆ ಕಡೆಯಿಂದ ಕೆ.ಎಂ.ನಾಗರಾಜು ಬೈಕ್ ನಲ್ಲಿ ಬರುತ್ತಿದ್ದ ವೇಳೆ ಹಿಂದೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನ ಮುಂದಿನ ಚಕ್ರ ಬೈಕ್ ಮೇಲೆ ಹರಿದಿದೆ ಬೈಕ್ ಕೆಳಗೆ ಸಿಲುಕಿಕೊಂಡ ಕೆ.ಎಂ.ನಾಗರಾಜು ತೀವ್ರ ಗಾಯಗೊಂಡಿದ್ರು. ಇವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

ಅಪಘಾತ ಸ್ಥಳದ ರಸ್ತೆ ತುಂಬೆಲ್ಲಾ ರಕ್ತ ಹರಿದಿದೆ , ಡಿವೈಎಸ್ಪಿ ಲಕ್ಷ್ಮಣಯ್ಯ, ಪಟ್ಟಣ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಬಸವರಾಜು, ಸಬ್ ಇನ್ಸ್ ಪೆಕ್ಟರ್ ಅಯ್ಯನಗೌಡ, ಸಂಚಾರ ಠಾಣೆ ಸಬ್ ಇನ್ಸ್ ಪೆಕ್ಟರ್ ಹನುಮಂತ ಉಪ್ಪಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.