ಚಾಮರಾಜನಗರ : ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯ ಜೀವಿಧಾಮದ ಮೀಣ್ಯಂ ಸಮೀಪದ ಗಾಜನೂರು ಬಳಿಯ ಅರಣ್ಯದಲ್ಲಿ ಕಳೆದ ತಿಂಗಳು ಐದು ಹುಲಿಗಳ ದಾರುಣ ಸಾವಿಗೆ ಸಂಬಂಧಿಸಿದಂತೆ ಎಚ್ಚೆತ್ತುಕೊಂಡ ಮಲೆ ಮಹದೇಶ್ವರ ವನ್ಯಜೀವಿಧಾಮದ ಅರಣ್ಯಾಧಿಕಾರಿಗಳು ಕಾಡಂಚಿನ ಗ್ರಾಮಗಳ ರೈತರಿಗೆ ಹೆಚ್ಚಿನ ಇಳುವರಿ ನೀಡುವ ಜಾನುವಾರು ತಳಿಗಳ ವಿತರಣೆ ಮಾಡಿದರು.

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ ವ್ಯಾಪ್ತಿಯ ಕೊತ್ತಗುಳಿ ಗ್ರಾಮಸ್ಥರಿಗೆ ಜಾನುವಾರುಗಳನ್ನು ವಿತರಣೆ ಮಾಡುವ ಈ ಉಪಕ್ರಮವನ್ನು ಟಿವಿಎಸ್ ಎಸ್ಎಸ್ಟಿ (ಟಿವಿಎಸ್ನ ಸಿಎಸ್ಆರ್ ವಿಭಾಗ) ಸಹಕಾರದೊಂದಿಗೆ ಕೈಗೊಳ್ಳಲಾಯಿತು.

ಗ್ರಾಮದ ರೈತರು ನಿಯಮಿತವಾಗಿ ತಮಿಳುನಾಡಿನಿಂದ ಜಾನುವಾರುಗಳನ್ನು ತಂದು ಅರಣ್ಯ ಪ್ರದೇಶಗಳಲ್ಲಿ ಮೇಯಿಸುತ್ತಿದ್ದರು. ಇನ್ನು ಮುಂದೆ ತಮಿಳುನಾಡಿನಿಂದ ಜಾನುವಾರುಗಳನ್ನು ತರುವುದಿಲ್ಲ ಎಂದು ಈ ವೇಳೆ ಪ್ರಮಾಣವಚನ ಸ್ವೀಕರಿಸಿದರು.

