ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಕುಂದಕೆರೆ ವಲಯದಲ್ಲಿ ಎರಡು ಹುಲಿಗಳ ನಡುವೆ ನಡೆದಿದ್ದ ಕಾದಾಟದಲ್ಲಿ ಗಂಡು ಹುಲಿ ಪೆಟ್ಟಿಗೊಳಗಾಗಿ ಕುಂದಕೆರೆ ಗ್ರಾಮದ ರೈತ ಮಹದೇವ್ ಎಂಬವರ ಜಮೀನಿನಲ್ಲಿ ನಿತ್ರಾಣಗೊಂಡಿತ್ತು ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣಾ ಕಾರ್ಯ ನಡೆಸಿ ಗಾಯಗೊಂಡಿದ್ದ ಹುಲಿಯನ್ನ ಮೈಸೂರಿನ ಕೂರ್ಗಳ್ಳಿಗೆ ಸ್ಥಳಾಂತರಿಸಿದ್ದರು ಆದರೆ ಹುಲಿ ಉಪಟಳದಿಂದ ಆತಂಕಕ್ಕೊಳಗಾಗಿದ್ದ ಗ್ರಾಮಸ್ಥರು ಹುಲಿ ಸೆರೆಗೆ ಒತ್ತಾಯಿಸಿದ್ದರು.

ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದ ರೈತನ ಜಮೀನಿನಲ್ಲಿ ನಡೆದಿದ್ದ ಹುಲಿಗಳ ಕಾಳಗ ಘಟನೆಗೆ ಸಂಬಂಧಿಸಿದಂತೆ ರೈತನ ಜಮೀನಿನ ಬಳಿ ಮತ್ತೊಂದು ಹುಲಿಗೆ ಬಾರಿ ಪೆಟ್ಟು ನೀಡಿ ಕಾಲ್ಕಿತ್ತಿದ್ದ ಹುಲಿ ಸೆರೆಗೆ ಗ್ರಾಮಸ್ಥರು ಒತ್ತಾಯಿಸಿದ್ದರು , ಇದಾದ ಬಳಿಕ ಪಾರ್ಥಸಾರಥಿ ಹಾಗೂ ರೋಹಿತ್ ಆನೆಗಳನ್ನ ಕೂಂಬಿಂಗ್ ಕಾರ್ಯಚರಣೆಗಿಳಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಶೋದ ನಡೆಸುತ್ತಿದ್ದಾರೆ.