ಚಾಮರಾಜನಗರ: ಕೆಎಸ್ ಆರ್ ಟಿಸಿ ಹಾಗೂ ಟಾಟಾ ಏಸ್ ನಡುವೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರ ಸಾವು, ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ‌ ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ ಬಳಿ‌ ನಡೆದಿದೆ.

ಕೊಳ್ಳೇಗಾಲ ತಾಲೂಕಿನ ಬಾಣೂರು ಗ್ರಾಮದ ರಾಜಮ್ಮ(50) ಶೃತಿ(28) ಮೃತರು. ಕೊಳ್ಳೇಗಾಲದಲ್ಲಿ ತಿಥಿ ಕಾರ್ಯಕ್ಕೆ ಬಂದು ವಾಪಾಸ್ ಆಗುವಾಗ ಅವಘಡ ಸಂಭವಿಸಿದೆ. ಪ್ರಕರಣ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.