ಚಾಮರಾಜನಗರ: ಕೋಳಿ ಸಾರಿನ ಜೊತೆ ಮುದ್ದೆ ತಿನ್ನುವ ಸ್ಪರ್ಧೆ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆಯಿತು.

18 ಮಂದಿ ಪುರುಷರು ಐವರು ಮಹಿಳೆಯರು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. 11 ಮುದ್ದೆ ತಿಂದು 5 ಸಾವಿರ ಬಹುಮಾನ, ಪಂಚೆ-ಶರ್ಟ್ ತನ್ನದಾಗಿಸಿಕೊಂಡ ಗ್ರಾಮದ ಕುನ್ನನಾಯಕ ಎಂಬುವವರು.

ಎರಡನೇ ಬಹುಮಾನ 9 ಮುದ್ದೆ ಸವಿದ ನಾಗಮಲ್ಲ ಎಂಬವರಿಗೆ ಸಿಕ್ಕಿದೆ. ಐದು ಮುದ್ದೆ ತಿಂದು ಮಹಿಳಾ ವಿಭಾಗದಲ್ಲಿ ಮಾದೇವಮ್ಮ ಪ್ರಥಮ ಬಹುಮಾನ ಪಡೆದಿದ್ದಾರೆ.