ಚಾಮರಾಜನಗರ: ರಾಜ್ಯ ಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ಆಗ್ರಹಿಸಿ, ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ದಲಿತ, ರೈತ, ಕನ್ನಡ ಮತ್ತು ಪ್ರಗತಿಪರಸಂಘಟನೆಗಳು ಡಿ.31 (ಮಂಗಳವಾರ) ರಂದು ಚಾಮರಾಜನಗರ ಸ್ವಯಂ ಪ್ರೇರಿತ ಬಂದ್ ಗೆ ನಿರ್ಧಾರ ಕೈಗೊಂಡಿದೆ.
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಅವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಸಂಘಟನೆಗಳ ಮುಖಂಡರು ತಮ್ಮ ಅಭಿಪ್ರಾಯ ಗಳನ್ನು ಮಂಡಿಸಿ, ಅಂತಿಮವಾಗಿ ಅಮಿತ್ ಶಾ ಹೇಳಿಕೆ ಖಂಡಿಸಿ, ಡಿ.31 ರ ಮಂಗಳವಾರ ಚಾಮರಾಜ ನಗರನಗರ ಬಂದ್ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಪಟ್ಟಣದಲ್ಲಿರುವ ವರ್ತಕರು, ಇತರ ಸಂಘಟನೆಗಳು ಬಂದ್ಗೆ ಹೆಚ್ಚಿನ ಸಹಕಾರ ನೀಡಬೇಕು. ರಾಷ್ಟ್ರಪತಿ ಗಮನ ಸೆಳೆಯಲು ಈ ಬಂದ್ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದರು.
ಬಂದ್ ಆಚರಣೆ ಮಾಡುವ ಸಲುವಾಗಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿದ್ದ ವೆಂಕಟರಮಣಸ್ವಾಮಿ ಮಾತನಾಡಿ, ಸಂಸತ್ ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ, ದೇಶದಿಂದ ಗಡೀಪಾರು ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಈ ಕೂಡಲೇ ಅಮಿತ್ ಶಾ ವಿರುದ್ಧ ಕ್ರಮ ಕೈಗೊಂಡು ಬಹಿರಂಗವಾಗಿ ದೇಶದಕ್ಷಮೆಯಾಚಿಸುವಂತೆ ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟಗಳು ನಡೆಯುತ್ತವೆ ಎಂದು ಎಚ್ಚರಿಕೆ ನೀಡಿದರು.
ಚಾಮರಾಜನಗರ ಬಂದ್ಗೆ ವರ್ತಕರ ಸಂಘ, ಕನ್ನಡ ಪರ ಸಂಘಟನೆಗಳು, ರೈತಸಂಘಟನೆಗಳು, ದಲಿತ ಸಂಘಟನೆಗಳು, ಚಿತ್ರಮಂದಿರ ಮಾಲೀಕರು, ಮಾಲೀಕರು ಚಾಲಕರ ಸಂಘ, ಆಟೋ ಮಾಲೀಕರು ಹಾಗೂ ಚಾಲಕರ ಸಂಘ, ಕಾರು ಮಾಲೀಕರು, ಚಾಲಕರ ಸಂಘ, ಲಾರಿ ಮಾಲೀಕರ ಸಂಘ, ಗೂಡ್ ಮಾಲೀಕರ, ಚಾಲಕರ ಸಂಘ, ಹೋಟೆಲ್ ಮಾಲೀಕರು, ಚಿತ್ರಮಂದಿರಗಳ ನೌಕರರು, ಪಟ್ಟಣದ ಎಲ್ಲಾ ಕೋಮಿನ ಯಜಮಾನರು, ಸಮುದಾಯದವರು ಹಾಗೂ ಸಂಘ-ಸಂಸ್ಥೆಗಳ ಮುಖಂಡರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಅವರುಸಕರತ್ನಾಕವಾಗಿ ಸ್ಪಂದಿಸಿದ್ದು, ಯಾವುದೇ ಅಹಿತಕರ ಘಟನೆಗಳುನಡೆಯದಂತೆಶಾಂತಿಯುತವಾಗಿ ನಡೆಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಎಸ್ಡಿಪಿಐನ ನಗರಸಭಾ ಸದಸ್ಯ ಎಂ.ಮಹೇಶ, ದಲಿತ ಸಂಘರ್ಷ ಸಮಿತಿ ಸಂಚಾಲಕ ಸಿ.ಎಂ.ಶಿವಣ್ಣ, ಯ.ನಾಗರಾಜು, ಲಾರಿ ಮಾಲೀಕರ ಸಂಘದ ಇರ್ಷಾದ್, ರಾಮಸಮುದ್ರ ಸುರೇಶ್ ಸೇರಿದಂತೆ ಅನೇಕರು ಮಾತನಾಡಿ, ಸ್ವಯಂ ಪ್ರೇರಿತ ಚಾಮರಾಜನಗರ ಬಂದ್ಗೆ ನಮ್ಮೆಲ್ಲರ ಬೆಂಬಲ ಇದೆ ಎಂದರು.
ಈ ಸಂದರ್ಭದಲ್ಲಿ ಆತಿಥೇಯರಾದ ನಾಗರಾಜು, ಮಹದೇವಯ್ಯ, ಶಿವಯ್ಯ, ದಲಿತ ಮುಖಂಡರಾದ ಛಲವಾದಿ ಮಹಾಸಭಾದ ಸೋಮುಸುಂದರ್, ಆಲೂರು ನಾಗೇಂದ್ರ, ಜನಧ್ವನಿ ರಾಮಸಮುದ್ರ ಸುರೇಶ್, ಆಟೋ ಉಮೇಶ್, ಜಿಲ್ಲಾ ಕಲಾವಿ ರಾಮ ಭಾಭಿ ಸಂಘದವರು ಇದ್ದರು. ಸಿದ್ದಯ್ಯನಾಪುರ, ರಂಗಸ್ವಾಮಿ, ಶಿವಣ್ಣ, ನಂಜುಂಡಯ್ಯ, ರಂಗಸ್ವಾಮಿಕಗಲವಾಡಿ, ದಸಂಸ ಬೆಳ್ಳಿಯಪ್ಪ ಭಾಗವಹಿಸಿದ್ದರು.

