ಗುಂಡ್ಲುಪೇಟೆ : ಆಕಸ್ಮಿಕ ಬೆಂಕಿಗೆ ಎತ್ತಿನಗಾಡಿ ಸಂಪೂರ್ಣವಾಗಿ ಸುಟ್ಟುಹೋಗಿದ್ದು ಘಟನೆಯಲ್ಲಿ ಒಂದು ಹಸು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದ ಸ್ವಾಮಿ ಎಂಬವರ ಜಮೀನಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಎತ್ತಿನ ಗಾಡಿ ಸಂಪೂರ್ಣ ಭಸ್ಮವಾಗಿದೆ, ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲೇ ಕಟ್ಟಲಾಗಿದ್ದ ಹಸು ಮೃತಪಟ್ಟಿದೆ, ಜೀವನೋಪಾಯಕ್ಕಾಗಿ ಇದ್ದಂತಹ ಜಾನುವಾರು ಕಳೆದುಕೊಂಡ ರೈತ ಸೂಕ್ತ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.

