ಗುಂಡ್ಲುಪೇಟೆ : ರೈತರ ಜಮೀನಿನಲ್ಲಿ ಅಳವಡಿಸಿದ್ದ  ಬೋರ್ವೆಲ್ ಕೇಬಲ್ ಸೇರಿದಂತೆ ಇತರ ವಸ್ತುಗಳು ಕಳುವಾಗಿರುವ ಘಟನೆ ತಾಲೂಕಿನ ಕಣ್ಣೇಗಾಲ ಗ್ರಾಮದಲ್ಲಿ ನಡೆದಿದೆ.

ಕಣ್ಣೇಗಾಲ ಗ್ರಾಮದ ಮಹೇಶ್, ರಾಚಪ್ಪ, ಗುರುಮಲ್ಲಪ್ಪ ಎಂಬವರ ಜಮೀನಿಗೆ ಪ್ರವೇಶಿಸಿದ ಕಳ್ಳರು ರೈತರು ಪಂಪ್ ಸೆಟ್ಗೆ ಅಳವಡಿಸಿದ್ದ ಕೇಬಲ್, ಸ್ಟಾಟರ್ಗಳನ್ನ ಸೋಮವಾರ ರಾತ್ರಿ ಎಗರಿಸಿ ಹೋಗಿದ್ದಾರೆ. ರಾತ್ರಿ ವೇಳೆ ಕರೆಂಟ್ ಇಲ್ಲದ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರು ಸಲೀಸಾಗಿ ಜಮೀನು ಪ್ರವೇಶಿಸಿ ಕೃತ್ಯ ಎಸಗುತ್ತಿದ್ದಾರೆ.

ಈಗಾಗಲೇ ಬೆಳೆ ನಷ್ಟದಲ್ಲಿರುವ ರೈತರು ಕೇಬಲ್ ಕಳ್ಳರ ಹಾವಳಿಯಿಂದ ಬೇಸತ್ತು ಹೋಗಿದ್ದು ಕಳ್ಳರ ಬಂಧನಕ್ಕೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ಗುಂಡ್ಲುಪೇಟೆ ಅಪರಾಧ ವಿಭಾಗದ ಪೊಲೀಸರು  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.