ಗುಂಡ್ಲುಪೇಟೆ : ಪಟ್ಟಣದ ಜಾಕೀರ್ ಹುಸೇನ್ ನಗರದ ಗೌತಮ್ ಕಾಲೇಜು ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಮಂಗಳವಾರ ಸಂಜೆ ವೇಳೆ ಬಂಧಿಸಿರುವ ಗುಂಡ್ಲುಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪಟ್ಟಣದ ಕ್ಯಾಲಿಕೇಟ್ ರಸ್ತೆಯ ಗೌತಮ ಕಾಲೇಜು ಸಮೀಪ ಸ್ಥಳೀಯ ನಿವಾಸಿಗಳಾದ ಸಲ್ಮಾನ್ ಮತ್ತು ಇಮ್ರಾನ್ ಎಂಬ ವ್ಯಕ್ತಿಗಳು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನರಿತ ಗುಂಡ್ಲುಪೇಟೆ ಪೊಲೀಸರು ದಾಳಿ ನಡೆಸಿ ಒಂದು ಕೆಜಿ 60 ಗ್ರಾಂ ಗಾಂಜಾವನ್ನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತೀಚೆಗೆ ಪಟ್ಟಣದಲ್ಲಿ ಗಾಂಜಾ ಮಾರಾಟ ಜಾಲವನ್ನ ಹತ್ತಿಕ್ಕಲು ಮುಂದಾಗಿರುವ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

