ಚಾಮರಾಜನಗರ : ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಾಮೀನು ಕಬಳಿಕೆ ಆರೋಪಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ನಡೆದಿದೆ.
ಕೊಳ್ಳೇಗಾಲ ಹನೂರು ಮುಖ್ಯರಸ್ತೆ ಬದಿಯಲ್ಲಿರುವ ಬೆಲೆ ಬಾಳುವ ಸರ್ಕಾರಿ ಜಮೀನಾಗಿದ್ದು, ಉಲ್ಲೇಪುರ ಸರ್ವೆ ನಂ : 355/1 5.5 ಎಕರೆ 356 ರಲ್ಲಿ 5.94 ಎಕರೆ 356 ಸಿ ನಲ್ಲಿ 2.58 ಎಕರೆ ಸರ್ಕಾರಿ ಭೂಮಿ ಕಬಳಿಕೆ ಆರೋಪ ಕೇಳಿಬಂದಿದೆ.

ತೆರವಿಗೆ ಜಿಲ್ಲಾಧಿಕಾರಿಗಳ ಆದೇಶವಿದ್ರು ತಾಲ್ಲೂಕು ಮಟ್ಟದ ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮೇಕೆ ಶೆಡ್ ನಿರ್ಮಾಣ ಮಾಡಲಾಗಿದೆ. ಕಳೆದ ಎರಡು ತಿಂಗಳ ಹಿಂದೆಗೆ ತೆರವು ನೋಟೀಸ್ ಜಿಲ್ಲಾಧಿಕಾರಿ ನೀಡಿದ್ದರು.
ಅನಧಿಕೃತವಾಗಿ ಶೆಡ್ ಗೆ ವಿದ್ಯುತ್ ಸಂಪರ್ಕ ಕೂಡ ವ್ಯಕ್ತಿ ಪಡೆದಿದ್ದರು. ರಾಜಕೀಯ ಪ್ರಭಾವಕ್ಕೆ ಹೆದರಿ ಜಮೀನು ಸ್ವಾಧೀನಕ್ಕೆ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಕೂಡಲೇ ಶೆಡ್ ತೆರವುಗೊಳಿಸಿ ಸರ್ಕಾರಿ ಭೂಮಿ ಮರು ಸ್ವಾಧೀನಪಡಿಸಿಕೊಳ್ಳವಂತೆ ಒತ್ತಾಯ ಮಾಡಲಾಗಿದೆ. ಹನೂರು ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಬಸವರಾಜ್ ಒತ್ತಾಯಿಸಿದ್ದಾರೆ.

