ಚಾಮರಾಜನಗರ : ಕಬ್ಬಿಗಾಗಿ ಲಾರಿಯ ಗ್ಲಾಸನ್ನ ಕಾಡಾನೆ ಯೊಂದು ಪುಡಿಗಟ್ಟಿದ ಘಟನೆ ಚಾಮರಾಜನಗರ ಹಾಸನೂರು ಸಮೀಪ ಸಂಭವಿಸಿದೆ, ಕಬ್ಬಿಗಾಗಿ ಲಾರಿಯ ಮುಂಭಾಗದ ಗ್ಲಾಸ್ ಮೇಲೆಯೇ ಕಾಲಿಟ್ಟ ಆನೆಯ ರಂಪಾಟ ಚಾಲಕನ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ದೃಶ್ಯ ಕಂಡುಬಂದಿದ್ದು ಚಾಮರಾಜನಗರ ಹಾಸನೂರು ರಸ್ತೆ ಮಾರ್ಗ ಮಧ್ಯದಲ್ಲಿ, ದಿಢೀರ್ ರಸ್ತೆಗೆ ಬಂದಂತಹ ಆನೆ ಕಬ್ಬು ತುಂಬಿದ್ದ ಲಾರಿಯನ್ನ ಅಡ್ಡಗಟ್ಟಿ ಲಾರಿಯ ಗ್ಲಾಸ್ ಮೇಲೆ ಕಾಲಿರಿಸಿದ್ದೇ ತಡ ಗ್ಲಾಸ್ ನುಜ್ಜುಗುಜ್ಜಾಗಿದೆ, ಲಾರಿ ಮುಂಭಾಗದಿಂದಲೇ ಕಬ್ಬನ್ನ ಕೆಳಗೆಳೆದಿದೆ, ಆನೆಯ ರಂಪಾಟದ ದೃಶ್ಯ  ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.