ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಬೆಳ್ಳಂಬೆಳೆಗ್ಗೆ ರಸ್ತೆಗಿಳಿದ ಒಂಟಿ ಸಲಗ ತರಕಾರಿ ಲಾರಿಗಳ ಸರ್ಚ್ ನಡೆಸಿದೆ. ಸಂಜೆ ವೇಳೆಯಲ್ಲಿ ಕಾಣಿಸಿಕೊಳ್ತಿದ್ದ ಒಂಟಿ ಸಲಗ ಬೆಳ್ಳಂಬೆಳೆಗ್ಗೆ ವಾಹನಗಳನ್ನ ಅಡ್ಡಗಟ್ಟಿ ಕೆಲಕಾಲ ರಸ್ತೆ ಸಂಚಾರ ಬಂದ್ ಮಾಡಿತ್ತು.

ಬಂಡೀಪುರದಲ್ಲಿ ಒಂಟಿಸಲಗನ ಕಾಟ ಹೆಚ್ಚಾಗಿದ್ದು ಬೆಳೆಗ್ಗೆನೆ ತರಕಾರಿ ವಾಹನಗಳಿಗಾಗಿ ಸರ್ಚ್ ನಡೆಸಿದೆ, ಪ್ರತಿನಿತ್ಯ ಸಂಜೆ ವೇಳೆ ಪ್ರತ್ಯಕ್ಷವಾಗ್ತಿದ್ದ ಸಲಗ ಮುಂಜಾನೆ ವೇಳೆಯಲ್ಲೂ ರಸ್ತೆಗೆ ಇಳಿಯುತ್ತಿದೆ,

ಬೆಳಗ್ಗೆ ವೇಳೆಯಲ್ಲಿ ಗುಂಡ್ಲುಪೇಟೆಯಿಂದ ತಮಿಳುನಾಡು ಕಡೆಗೆ ಸಾಗಿಸುವ ತರಕಾರಿಗಳಿಗಾಗಿ ಕಾಯುವ ಸಲಗ ವಾಹನಗಳು ಬರುತ್ತಿದ್ದಂತೆ ಅಡ್ಡಗಟ್ಟಿ ಶೋದ ನಡೆಸುತ್ತಿದೆ, ಒಂದೆಡೆ ನಡುರಸ್ತೆಯಲ್ಲಿ ಸಲಗದ ರಾಜಗಾಂಭೀರ್ಯ ನಡೆ ನೋಡುಗರಿಗೆ ಮುದ ಎನಿಸಿದ್ರು ಕೆಲವರಿಗೆ ಎದೆ ಝಲ್ ಎನಿಸುವಂತ ಅನುಭವಗಳಾಗಿವೆ.