ಗುಂಡ್ಲುಪೇಟೆ : ಕೆಲ ತಿಂಗಳುಗಳಿಂದ ತರಕಾರಿ ಹೊತ್ತು ಸಾಗುವ ಲಾರಿಗಳನ್ನ ಅಡ್ಡಗಟ್ಟಿ ತರಕಾರಿ ವಸೂಲಿ ಮಾಡ್ತಿದ್ದ ಒಂಟಿ ಸಲಗ ಸ್ವಲ್ಪ ದಿನದ ಮಟ್ಟಿಗೆ ವಿರಾಮ ಹೇಳಿತ್ತಾದರೂ ಮತ್ತೆ ವಸೂಲಿಗಿಳಿದಿದ್ದು ರಂಪಾಟ ನಡೆಸುತ್ತಿದೆ.
ಬಂಡೀಪುರದಿಂದ ತಮಿಳುನಾಡು ಮಾರ್ಗವಾಗಿ ಚಲಿಸುವ ವಾಹನ ಸವಾರರು ಒಂಟಿ ಸಲಗವನ್ನ ಕಂಡು ಆತಂಕಕ್ಕೊಳಗಾಗಿದ್ದಾರೆ, ರಸ್ತೆಬದಿಯಲ್ಲಿ ನಿಂತು ಭಯಭೀತಿಗೊಳಿಸಿದ್ದ ಒಂಟಿಸಲಗವನ್ನ ಹಿಮ್ಮೆಟ್ಟಿಸಲು ಬಂದಂತಹ ಇಲಾಖೆ ವಾಹನವನ್ನೇ ಬೆನ್ನಟ್ಟಿ ಹೋದ ದೃಶ್ಯ ಆ ಮಾರ್ಗವಾಗಿ ಚಲಿಸುತ್ತಿದ್ದವರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

