ಗುಂಡ್ಲುಪೇಟೆ : ಪ್ರತಿಷ್ಠಿತ ಹುಲಿ ಸಂರಕ್ಷಿತಾ ಪ್ರದೇಶ ಬಂಡೀಪುರದಲ್ಲಿ ಒಂಟಿ ಸಲಗವೊಂದು ಕೆರೆಯಲ್ಲಿ ಮಿಂದೆದ್ದ ದೃಶ್ಯವನ್ನ ಸಪಾರಿಗೆ ತೆರಳಿದ್ದ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದ್ದಾರೆ.

ಬಂಡೀಪುರದಲ್ಲಿ ಇತ್ತೀಚೆಗೆ ವನ್ಯಪ್ರಾಣಿಗಳ ಕಲರವ ಪ್ರವಾಸಿಗರನ್ನ ಪುಳಕಿತಗೊಳಿಸುತ್ತಿವೆ, ಪ್ರತಿನಿತ್ಯ ಸಪಾರಿಯಲ್ಲಿ ಕಾಣಿಸಿಕೊಳ್ತಿರೋ ಹುಲಿ, ಆನೆ , ಚಿರತೆ ಸಂಕುಲ ಬಂಡೀಪುರದ ವೈಭವವನ್ನ ಹೆಚ್ಚಿಸಿವೆ.

ಜಿಟಿಜಿಟಿ ಮಳೆಯಲ್ಲಿ ಗುಂಪುಗುಂಪಾಗಿ ಕಾಣಿಸಿಕೊಳ್ಳೋ ಆನೆಗಳು ಪ್ರವಾಸಿಗರಿಗೆ ಪೋಸ್ ಕೊಡ್ತಿವೆ, ಇತ್ತ ಒಂಟಿ ಸಲಗವೊಂದು ಕೆರೆಯಲ್ಲಿ ಮಿಂದೇಳುವ ದೃಶ್ಯವನ್ನ ಸಪಾರಿಗೆ ತೆರಳಿದ್ದವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಲಗದ ಜಲಕ್ರೀಡೆ ಸಖತ್ ವೈರಲ್ಲಾಗಿದೆ.