ಗುಂಡ್ಲುಪೇಟೆ : ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆ ಚಿರತೆಯೊಂದು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಓಂಕಾರ್ ಅರಣ್ಯ ವಲಯದ ಮಂಚಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಓಂಕಾರ್ ವಲಯದಲ್ಲಿನ ಮಂಚಹಳ್ಳಿ ಗ್ರಾಮದ ಜನರು ಕಾಡು ಪ್ರಾಣಿಗಳ ಕಾಟದಿಂದ ಬೇಸತ್ತು ಹೋಗಿದ್ದಾರೆ. ನೆನ್ನೆ ತಡರಾತ್ರಿ ಗ್ರಾಮಪ್ರವೇಶಿಸಿದ ಚಿರತೆ ಸಿದ್ಧನಾಯ್ಕ ಎಂಬುವವರ ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆ ದಾಳಿ ನಡೆಸಿದೆ ಈ ವೇಳೆ ಕರುವಿನ ಚೀರಾಟ ಕೇಳಿ ಅಕ್ಕಪಕ್ಕದ ಜನರು ಕೂಗಿಕೊಂಡಿದ್ದಾರೆ ಈ ವೇಳೆ ಗಾಬರಿಗೊಂಡ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ.

