ಚಾಮರಾಜನಗರ: 5 ಹುಲಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಘಟನಾ ಸ್ಥಳಕ್ಕೆ ಪಿಸಿಸಿಎಫ್ ಬಿ.ಪಿ.ರವಿ ತಂಡದಿಂದ ತನಿಖೆ ನಡೆಸಲಾಯಿತು. ರವಿ ನೇತೃತ್ವದಲ್ಲಿ 6 ಮಂದಿ ತನಿಖಾ ತಂಡವನ್ನು ಅರಣ್ಯ ಇಲಾಖೆ ನೇಮಿಸಿದೆ. 14 ದಿನದಲ್ಲಿ ಹುಲಿ ಸಾವಿನ ಸಮಗ್ರ ವರದಿ ಕೊಡಲು ಸೂಚನೆ ನೀಡಲಾಗಿದೆ.
ಇಂದು 4 ಮರಿಗಳ ಮರಣೋತ್ತರ ಪರೀಕ್ಷೆ ಬಳಿಕ ಎನ್ ಟಿಸಿಎ ಮಾರ್ಗಸೂಚಿ ಅನ್ವಯ 5 ಹುಲಿಗಳ ಕಳೇಬರ ಅಂತ್ಯಕ್ರಿಯೆ ನಡೆಯಲಿದೆ. ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯದಲ್ಲಿ ಹುಲಿಗಳು ಮೃತಪಟ್ಟಿತ್ತು.

