ಚಾಮರಾಜನಗರ: ಐದು ಹುಲಿ ಸಾವು ಕೇಸ್ ನಲ್ಲಿ ಹನೂರು ತಾಲೂಕಿನ ಗಾಜನೂರಿನ ನಾಲ್ಕು ಮಂದಿ ದನಗಾಹಿಗಳನ್ನು ಇಲಾಖೆ ವಶಕ್ಕೆ ಪಡೆದಿದೆ. ಹುಲಿಗಳ ಕಳೇಬರ ಸಿಕ್ಕ ಸ್ಥಳದಲ್ಲಿ ಹಸುವಿನ ದೇಹ ಪತ್ತೆಯಾಗಿದೆ.
ಬೇಟೆಯಾಡಿದ್ದ ಹಸುವಿಗೆ ಕೀಟನಾಶಕ ಸಿಂಪಡಣೆ ಶಂಕೆ ಹಿನ್ನೆಲೆ ದನಗಾಹಿಗಳು ವಶಕ್ಕೆ ಪಡೆಯಲಾಗಿದೆ. ಮೃತಪಟ್ಟಿರುವ ಹಸು ಯಾರದ್ದು ಎಂಬುದನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚುತ್ತಿದ್ದಾರೆ.
ಹಸು ಕೊಂದ ಕೋಪಕ್ಕೆ ದನಗಾಹಿಗಳು ಇಟ್ರಾ ವಿಷ ಇಲ್ಲವೇ ಬೇಟೆಗಾರರ ಕೃತ್ಯವೇ ಎಂಬುದರ ತನಿಖೆಯಾಗಲಿದೆ. ಮೃತಪಟ್ಟ ಹುಲಿಗಳಲ್ಲಿ ನಾಲ್ಕು ಹೆಣ್ಣು ಹುಲಿ, ಒಂದು ಗಂಡು ಹುಲಿಯಾಗಿದೆ. ಕೆಲವೇ ತಿಂಗಳುಗಳಲ್ಲಿ ಹುಲಿಗಳು ಟೆರಿಟರಿ ಮಾಡಿಕೊಳ್ಳುವ ಹಂತದಲ್ಲಿತ್ತು.

