ಚಾಮರಾಜನಗರ : ಕಳೆದ ಜೂನ್ ತಿಂಗಳಲ್ಲಿ ಐದು ಹುಲಿಗಳ ಧಾರುಣ ಸಾವಿನ ಘಟನೆ ಮಾಸುವ ಮುನ್ನವೇ ಮತ್ತೆರಡು ಹುಲಿ ಮರಿಗಳ ಸಾವಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮ ವ್ಯಾಪ್ತಿಯ ಶಾಗ್ಯ ಶಾಖೆಯ ಹೊಳೆಮೂರ್ದಟ್ಟಿ ಗಸ್ತಿನ ಕಿರಬನಕಲ್ಲುಗುಡ್ಡ ಅರಣ್ಯ ಪ್ರದೇಶದಲ್ಲಿ ಎರಡು ಹುಲಿ ಮರಿಗಳು ಸಾವನ್ನಪ್ಪಿದ್ದು ತಾಯಿ ಹುಲಿಯಿಂದ ಬೇರ್ಪಟ್ಟು ಹಸಿವಿನಿಂದ ನಿತ್ರಾಣಗೊಂಡು ಸಾವನ್ನಪ್ಪಿರಬಹುದು ಎನ್ನಲಾಗಿದೆ.
ಸುಮಾರು 15 ದಿನಗಳ ಹಿಂದೆ ಜನಿಸಿರುವ ಹೆಣ್ಣು ಮತ್ತು ಗಂಡು ಮರಿಗಳು ತಾಯಿ ಹುಲಿಯಿಂದ ಬೇರ್ಪಟ್ಟು ಸಾವನ್ನಪ್ಪಿದ್ದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

