Bengaluru 22°C
Ad

ಮಾದಪ್ಪನ ಸನ್ನಿಧಿಯಲ್ಲಿ ಬರೋಬ್ಬರಿ 2 ಕೋಟಿ 58 ಲಕ್ಷ ಕಾಣಿಕೆ ಸಂಗ್ರಹ

ಮಲೆ ಮಹದೇಶ್ವರ ಬೆಟ್ಟದಲ್ಲಿ ನೆಲೆಸಿರುವ ಮಾದೇಶ್ವರಪ್ಪನ ಸನ್ನಿಧಿಯಲ್ಲಿ ಬರೋಬ್ಬರಿ 2 ಕೋಟಿ 58 ಲಕ್ಷ ಕಾಣಿಕೆ ಸಂಗ್ರಹವಾಗಿದೆ ಕಳೆದ 30 ದಿನಗಳಲ್ಲಿ ಮಾದಪ್ಪನ ಹುಂಡಿ ತುಂಬಿ ಹರಿದಿದೆ.

ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟದಲ್ಲಿ ನೆಲೆಸಿರುವ ಮಾದೇಶ್ವರಪ್ಪನ ಸನ್ನಿಧಿಯಲ್ಲಿ ಬರೋಬ್ಬರಿ 2 ಕೋಟಿ 58 ಲಕ್ಷ ಕಾಣಿಕೆ ಸಂಗ್ರಹವಾಗಿದೆ ಕಳೆದ 30 ದಿನಗಳಲ್ಲಿ ಮಾದಪ್ಪನ ಹುಂಡಿ ತುಂಬಿ ಹರಿದಿದೆ.

Ad
300x250 2

ಮಹದೇಶ್ವರ ಬೆಟ್ಟದಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ಕಾರ್ಯ ನಡೆಸಲಾಗಿದ್ದು ಮಹದೇಶ್ವರನಿಗೆ ನಗದು ರೂಪದಲ್ಲಿ ಒಟ್ಟು 2,58,44,097 ರೂಪಾಯಿ ಕಾಣಿಕೆ ಹರಿದು ಬಂದಿದೆ.

93 ಗ್ರಾಂ ಚಿನ್ನ, 3 ಕೆಜಿ 350 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಸೌದಿ ಅರೇಬಿಯಾ, ಜಪಾನ್, ನೇಪಾಳ ಹಾಗು ಕತಾರ್ ದೇಶದ ನಾಲ್ಕು ಕರೆನ್ಸಿ ನೋಟುಗಳು ಹುಂಡಿಯಲ್ಲಿ ಸಿಕ್ಕಿವೆ. ಸದ್ಯ ಚಲಾವಣೆಯಲ್ಲಿ‌ ಇಲ್ಲದ 2000 ಮುಖಬೆಲೆಯ 25 ನೋಟುಗಳು‌ ಸಹ ಹುಂಡಿಯಲ್ಲಿ ‌ಸಿಕ್ಕಿವೆ.

Ad
Ad
Nk Channel Final 21 09 2023
Ad