ಹುಬ್ಬಳ್ಳಿ : ನಗರದ ಗದಗ ರಸ್ತೆಯಲ್ಲಿ ಇಂದು ಬೆಳಿಗ್ಗೆ ನಾಯಿಯ ಜೊತೆ ವಾಕಿಂಗ್ ಮಾಡಲು ಹೋಗಿದ್ದ ವೇಳೆ ಶ್ವಾನ ಮೇಲೆ ಸರ್ಕಾರಿ ಬಸ್ ಹರಿದ ಪರಿಣಾಮ ನಾಯಿಯ ಮಾಲೀಕ ಬಸ್ ತಡೆದು ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಗದಗ ರೋಡ್ ನಿವಾಸಿಯೊಬ್ಬರು ತಾವು ಸಾಕಿದ ಬಾಕ್ಸರ್ ಆಗಿದೆ. ಜಾತಿಯ ಕಲ್ಬುರ್ಗಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಬಸ್ ಹರಿದ ಪರಿಣಾಮ ನಾಯಿ ಸ್ಥಳದಲ್ಲೇ ಮೃತಪಟ್ಟಿದೆ. ಇದರಿಂದ ಕೋಪಗೊಂಡ ನಾಯಿಯ ಮಾಲೀಕ ಬಸ್ ನಿಲ್ಲಿಸಿ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದಾನೆ. ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.