ಸಚಿವ ಬೈರತಿ ಸುರೇಶ್ ಪುತ್ರ ಹಾಗೂ ಯಲಹಂಕ ಬಿಜೆಪಿ ಶಾಸಕ ಎಸ್‌.ಆರ್ ವಿಶ್ವನಾಥ್ ಪುತ್ರಿಯ ವಿವಾಹ ನಿಶ್ಚಿತಾರ್ಥ ಇಂದು ಅದ್ಧೂರಿಯಾಗಿ
ನೆರವೇರಿದೆ.

ಕರ್ನಾಟಕದ ರಾಜಕೀಯದಲ್ಲಿ ಬೇರೆ-ಬೇರೆ ಪಕ್ಷದಲ್ಲಿರುವ ಇಬ್ಬರು ನಾಯಕರು ಇದೀಗ ಬೀಗರಾಗಿದ್ದಾರೆ. ಈ ಮೂಲಕ ರಾಜಕೀಯದಲ್ಲಿ ಯಾರು ಯಾರಿಗೆ ಶತೃಗಳೂ ಅಲ್ಲ, ಮಿತ್ರರೂ ಅಲ್ಲ ಎಂಬುದು ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಬುಧವಾರ ಬೆಂಗಳೂರು ಪ್ರಭಾವಿ ನಾಯಕರ ಮಕ್ಕಳ ನಿಶ್ಚಿತಾರ್ಥ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ​ ಶಾಕ್ಷಿಯಾದರು.

ರಾಜ್ಯದ ನಗರಾಭಿವೃದ್ಧಿ ಸಚಿವರಾಗಿರುವ ಬೈರತಿ ಸುರೇಶ್​ ಮಗ ಹಾಗೂ ಬಿಜೆಪಿ ಯಲಹಂಕ ಶಾಸಕ ಎಸ್​ ಆರ್ ವಿಶ್ವನಾಥ್​ ಮಗಳು ಮುಂದಿನ ವರ್ಷ ವಿವಾಹವಾಗಲಿದ್ದಾರೆ. ಬುಧವಾರ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ. ಇದು ಲವ್​ ಕಮ್​ ಆರೆಂಜ್​ ಮ್ಯಾರೇಜ್​ ಎಂದು ತಿಳಿದುಬಂದಿದೆ.

ಬುಧವಾರ ಖಾಸಗಿ ಹೋಟೆಲ್​ನಲ್ಲಿ ವಿಶ್ವನಾಥ್ ಪುತ್ರಿ ಅಪೂರ್ವ ಹಾಗೂ ಬೈರತಿ ಸುರೇಶ್​ ಪುತ್ರ ಸಂಜಯ್​ ನಿಶ್ಚಿತಾರ್ಥ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಕ್ಕೆ ಎರಡೂ ಪಕ್ಷದ ರಾಜಕೀಯ ನಾಯಕತರು ಆಗಮಿಸಿ ಭಾವಿ ದಂಪತಿಗಳಿಗೆ ಶುಭಾರೈಸಿದರು.

ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ , ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಅವರಲ್ಲದೆ, ಸಚಿವ ರಾಮಲಿಂಗಾರೆಡ್ಡಿ, ಡಾ ಎಂ ಸಿ ಸುಧಾಕರ್, ಶಾಸಕ ಶರತ್ ಬಚ್ಚೇಗೌಡ ಹಲವು ಕಾಂಗ್ರೆಸ್ ನಾಯಕರು, ಮುನಿರತ್ನ, ಬೈರತಿ ಬಸವರಾಜು ಸೇರಿ ಹಲವು ಬಿಜೆಪಿ ನಾಯಕರು ಕೂಡ ಭಾಗವಹಿಸಿದರು.