ಬೀದರ್ : ವಿಶ್ವವಿದ್ಯಾಲಯವು ಮಾರ್ಚ್ ಏಪ್ರಿಲ್ನಲ್ಲಿ ನಡೆಸಿದ ಸ್ನಾತಕ ಪದವಿಯ ಮೊದಲ ಸೆಮಿಸ್ಟರ್ನ ಫಲಿತಾಂಶವನ್ನು ಬುಧವಾರ ಘೋಷಿಸಿದೆ. ಕುಲಪತಿ ಪ್ರೊ.ಬಿ.ಎಸ್. ಬಿರಾದಾರ, ಕುಲಸಚಿವ (ಮೌಲ್ಯಮಾಪನ) ಪರಮೇಶ್ವರ ನಾಯಕ ಟಿ. ಅವರು ಫಲಿತಾಂಶ ಘೋಷಿಸಿದರು.
ಮಾರ್ಚ್-ಏಪ್ರಿಲ್ನಲ್ಲಿ ಸ್ನಾತಕ ಪದವಿಗಳಾದ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ ಮೊದಲ ಸೆಮಿಸ್ಟರ್ ಪರೀಕ್ಷೆ ನಡೆಸಲಾಗಿತ್ತು. ಒಟ್ಟು 11 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಸಿಬ್ಬಂದಿ ಕೊರತೆ, ಸಂಪನ್ಮೂಲದ ಕೊರತೆ ನಡುವೆಯೂ ಸಕಾಲಕ್ಕೆ ಫಲಿತಾಂಶ ಘೋಷಿಸಲಾಗಿದೆ ಎಂದು ಪರಮೇಶ್ವರ ನಾಯಕ ಟಿ. ತಿಳಿಸಿದರು.
ಸಿಂಡಿಕೇಟ್ ಸದಸ್ಯರಾದ ನಾಗಭೂಷಣ್ ಮಡೆಪ್ಪ ಕಮಠಾಣೆ, ಶಾಂತಲಿಂಗ ಸಾವಳಗಿ, ಕುಲಸಚಿವ ಮಹಮ್ಮದ್ ಶಕೀಲ್, ವಿಶೇಷಾಧಿಕಾರಿ ರವೀಂದ್ರನಾಥ ಗಬಾಡಿ ಹಾಜರಿದ್ದರು.

