ಬೀದರ್: ತಾಲ್ಲೂಕಿನ ಚೊಂಡಿ ಗ್ರಾಮದ ಸಮೀಪ ಜಿಂಕೆ ಬೇಟೆಯಾಡಿದ ಮೂವರನ್ನು ಬಂಧಿಸಲಾಗಿದೆ. ಕಲಬುರಗಿ ಜಿಲ್ಲೆ ಚಿಂಚೋಳಿಯ ಸೊಹೆಬ್ ಮಲ್ಲಿಕ್, ಹೈದರಾಬಾದಿನ ಅಬ್ದುಲ್ ಸಾಹಿದ್ ಮತ್ತು ಹಮೀದ್ ಬಂಧಿತರು.
ಭಾನುವಾರ ತಡರಾತ್ರಿ ಚೊಂಡಿ ಸಮೀಪಲಿ ಗುಂಡಿನ ಸದ್ದು ಕೇಳಿಸಿದೆ. ಗ್ರಾಮಸ್ಥರು ತಕ್ಷಣವೇ ಜನವಾಡ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಕೃತ್ಯಕ್ಕೆ ಬಳಸಿದ ಬಂದೂಕು, ಕಾರು ಹಾಗೂ ಮೃತ ಜಿಂಕೆಯನ್ನು ಜಪ್ತಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ಬಂಧಿತರನ್ನು ಆನಂತರ ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿಸಿದ್ದಾರೆ.

