Bengaluru 29°C
Ad

ಬೀದರ್: ರಾತ್ರಿ ಮಣ್ಣಲ್ಲಿ ಹೂತಿದ್ದ ಮಗು ಬೆಳಿಗ್ಗೆ ಸೋಗುಲದಲ್ಲಿ ಪ್ರತ್ಯಕ್ಷ!

ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದ ಒಂದೂವರೆ ವರ್ಷದ ಮಗುವಿನ ಮೃತದೇಹ ಬೆಳಗ್ಗೆ ಉಯ್ಯಾಲೆಯಲ್ಲಿ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು, ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿರುವ ಘಟನೆ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ನಡೆದಿದೆ.

ಬೀದರ್: ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದ ಒಂದೂವರೆ ವರ್ಷದ ಮಗುವಿನ ಮೃತದೇಹ ಬೆಳಗ್ಗೆ ಉಯ್ಯಾಲೆಯಲ್ಲಿ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು, ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿರುವ ಘಟನೆ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ನಡೆದಿದೆ.

Ad
300x250 2

ಮಂಠಾಳ ಗ್ರಾಮದ ನಿವಾಸಿ ಅಂಬಯ್ಯಸ್ವಾಮಿ ಎಂಬುವವರ ಒಂದೂವರೆ ವರ್ಷದ ದೀಪ್ತಿ ಅನಾರೋಗ್ಯದಿಂದ ಜೂನ್ 29ರ ಸಂಜೆ ಸಾವನ್ನಪ್ಪಿದ್ದಳು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ತಡರಾತ್ರಿ ಮಗುವಿನ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಿದ್ದರು. ಆದರೆ ಮರುದಿನ ಅಂದರೆ ಜೂನ್ 30ರ ಬೆಳಗ್ಗೆ ಮರಕ್ಕೆ ಕಟ್ಟಿದ್ದ ಜೋಕಾಲಿ ಯಲ್ಲಿ ಮಗುವಿನ ಮೃತದೇಹ ಪ್ರತ್ಯಕ್ಷವಾಗಿದೆ.

ಮಣ್ಣಲ್ಲಿ ಮಣ್ಣಾಗಿದ್ದ ಮಗುವನ್ನು ಬೆಳಿಗ್ಗೆ ಮರದಲ್ಲಿ ಕಂಡು ಗ್ರಾಮಸ್ಥರು ಆಶ್ಚರ್ಯ ಪಟ್ಟಿದ್ದಾರೆ. ಪುನಃ ಅದೇ ಸ್ಥಳದಲ್ಲಿ ಮಗುವಿನ ಅಂತ್ಯಸಂಸ್ಕಾರವನ್ನು ಕುಟುಂಬಸ್ಥರು ನೆರವೇರಿಸಿದರು. ಮಾಟ-ಮಂತ್ರ ಮಾಡುವ ಮಾಂತ್ರಿಕರು ಮಗುವಿನ ಶವ ಗುಂಡಿಯಿಂದ ಮೇಲಕ್ಕೆ ತೆಗೆದಿರುವ ಶಂಕೆ ವ್ಯಕ್ತವಾಗಿದೆ.

Ad
Ad
Nk Channel Final 21 09 2023
Ad