ಹುಲಸೂರ : ಭಾಲ್ಕಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಭೀಮಾ ನರಸಿಂಗ ಸೂರ್ಯವಂಶಿ (60) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಮೆಹಕರ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಆರೋಪಿ ಬಾಲಕಿಯ ಮನೆಯವರಿಗೆ ಪರಿಚಿತನಾಗಿದ್ದನು. ಬಾಲಕಿ 8ನೇ ತರಗತಿವರೆಗೆ ಓದಿದ್ದು, ಎರಡು ವರ್ಷಗಳ ಹಿಂದೆ ಶಾಲೆ ಬಿಟ್ಟಿದ್ದಳು. ಆಗಾಗ ಆಕೆಯ ಮನೆಗೆ ಬರುತ್ತಿದ್ದಳು.

ಮನೆಗೆ ಬಂದಾಗ ಆತ ಅತ್ಯಾಚಾರ ಮಾಡಿದ್ದಾನೆ. ಬಾಲಕಿ ಗರ್ಭಿಣಿಯಾದ ನಂತರ ಲೈಂಗಿಕ ಕಿರುಕುಳ ನೀಡಿದ ವಿಷಯ ಮನೆಯವರಿಗೆ ಗೊತ್ತಾಗಿದೆ. ಬಾಲಕಿ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪಿಎಸ್ಐ ಮಾಣಿಕಪ್ಪ ಹಲಮಡಗಿ ತಿಳಿಸಿದ್ದಾರೆ.