Bengaluru 21°C
Ad

ಸ್ವಾತಂತ್ರ್ಯ ತರಲು ಬಿಜೆಪಿ ಏನು ಮಾಡಿದ ಇತಿಹಾಸವಿದೆ : ಬಿಜೆಪಿ ವಿರುದ್ಧ ಜಮೀರ್‌ ಗುಡುಗು

ರಾಜ್ಯ ಸರ್ಕಾರದಲ್ಲಿ ಮತ್ತೆ ಡಿಸಿಎಂ ಕೂಗು ಕೇಳಿ ಬಂದ ವಿಚಾರ.ಬೀದರ್ ನಲ್ಲಿ ವಸತಿ ಹಾಗೂ ವಕ್ಫ ಸಚಿವ ಜಮ್ಮೀರ್ ಅಹಮ್ಮದ್ ಖಾನ್ ಬಿಜೆಪಿ ನಾಯಕರ ವಿರುದ್ಧ ಗುಡುಗಿದ್ದಾರೆ

ಬೀದರ್ : ರಾಜ್ಯ ಸರ್ಕಾರದಲ್ಲಿ ಮತ್ತೆ ಡಿಸಿಎಂ ಕೂಗು ಕೇಳಿ ಬಂದ ವಿಚಾರ.ಬೀದರ್ ನಲ್ಲಿ ವಸತಿ ಹಾಗೂ ವಕ್ಫ ಸಚಿವ ಜಮ್ಮೀರ್ ಅಹಮ್ಮದ್ ಖಾನ್ ಬಿಜೆಪಿ ನಾಯಕರ ವಿರುದ್ಧ ಗುಡುಗಿದ್ದಾರೆ,

ಮಾಧ್ಯಮದೊಂದಿಗೆ ಮಾತನಾಡಿದ ಅವರು ನಮ್ಮ ಅಭಿಪ್ರಾಯ ನಾವು ಹೇಳಿದ್ದೆವೆ ನಮ್ಮ ಪಕ್ಷ ಹೈಕಮಾಂಡ್ ಪಕ್ಷವಾಗಿದೆ. ಹೀಗಾಗಿ ಹೈಕಮಾಂಡ್ ಡಿಎಂಸಿ ಮಾಡೋದು. ಪರಮೇಶ್ವರ್, ರಾಜಣ್ಣ, ಸತೀಶ್ ಜಾರಕಿಹೊಳಿ ಅವರ ಅಭಿಪ್ರಾಯ ಹೇಳಿದ್ದಾರೆ.ಎಂಬಿ ಪಾಟೀಲ್ ಕೂಡಾ ಅವರ ಅಭಿಪ್ರಾಯ ಹೇಳಿದ್ದಾರೆ.ನಾನು ರಹೀಂಖಾನ್ ನಮ್ಮ ಅಭಿಪ್ರಾಯ ಹೇಳಿದ್ದೆವೆ‌ ಎಂದಿದ್ದಾರೆ.

ದರ್ಶನಗೆ ಶಿಕ್ಷೆಯಾಗಿದೆ ಈಗಾ ಜೈಲಿನಲ್ಲಿ ಇದ್ದಾರೆ, ಹೀಗಾಗಿ ಈ ಬಗ್ಗೆ ಕಾಮೆಂಟ್ ಮಾಡಲ್ಲಾ ಎಂದು ಸಚಿವ ಜಮ್ಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.ಆದರೆ ಇನ್ನು ಸೂರಜ್ ರೇವಣ್ಣ ಪ್ರಕರಣ ತನಿಖೆ ನಡೆಯುತ್ತಿದೆ ಎಂದು ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲಿಲ್ಲ.

ಈ ದೇಶಕ್ಕೆ ಸ್ವಾತಂತ್ರ್ಯ ತಂದಿದ್ದು ನಾವು. ಸ್ವಾತಂತ್ರ್ಯ ತರಲು ಬಿಜೆಪಿ ಏನು ಮಾಡಿದ ಇತಿಹಾಸವಿದೆ.ಬಿಜೆಪಿ ಹಾಗೂ ಆರ್ ಎಸ್ ಎಸ್ ಯಾರ ಜೊತೆ ಇದ್ರು ಅದು ಇತಿಹಾಸವಿದೆ. ಈ ದೇಶ ನಮ್ಮದು ರೀ ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ.

Ad
Ad
Nk Channel Final 21 09 2023
Ad