ಬೀದರ್: ಜಮೀನಿನಲ್ಲಿ ಅನುಚಿತ ವರ್ತನೆ‌ ಹಿನ್ನಲೆ‌ ಕೆರಳಿದ‌ ಮಹಿಳೆಯೊಬ್ಬಳು ಜೆಸ್ಕಾಂ ಗುತ್ತಿಗೆದಾರನಿಗೆ‌ ಚಪ್ಪಲಿಯಿಂದ ಹೊಡೆದಿರುವ ಘಟನೆ ಶನಿವಾರ ಔರಾದ ತಾಲೂಕಿನ ಜಕನಾಳ್‌ ಗ್ರಾಮದಲ್ಲಿ ನಡೆದಿದೆ.

ಚಿಕ್ಲಿ(ಯು) ಗ್ರಾಮದ ಅವಿನಾಶ್ ಜಾಧವ್ ಹಲ್ಲೆಗೊಳಗಾದ ಗುತ್ತಿಗೆದಾರ.

ವಿದ್ಯುತ್ ಕಂಬ ಮತ್ತು ತಂತಿ‌ ಜೋಡಣೆ ಕೆಲಸದ ಗುತ್ತಿಗೆ ಪಡೆದಿರುವ ಅವಿನಾಶ ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಕುಡಿಯುವ ನೀರು ಕೇಳುವ ನೆಪದಲ್ಲಿ ಗುತ್ತಿಗೆದಾರ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ಚಪ್ಪಲಿಯಿಂದ ಹೊಡೆದಿದ್ದಾಳೆ.‌ ಈ ಸುತ್ತಲಿನ ರೈತರು ಸ್ಥಳಕ್ಕೆ ಬಂದು ಚಪ್ಪಲಿಯಿಂದ‌ ಹೊಡೆಯುವುದನ್ನು‌ ವಿಡಿಯೋ ಮಾಡಿದ್ದಾರೆ.

ಮಹಿಳೆ ದೂರು ನೀಡಲು ನಿರಾಕರಿಸಿದ್ದರಿಂದ‌‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ‌ ಸೆಕ್ಷೆನ್ 110 ಅಡಿ ಅವಿನಾಶ್ ನನ್ನು ವಶಕ್ಕೆ ಪಡೆದು ತಹಶೀಲ್ದಾರ್ ಮುಂದೆ ಹಾಜರುಪಡಿಸಿ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ.