ಬೀದರ್: ಜಿಲ್ಲೆಯ ಹಾರಕೂಡ‌ ಮಠದ ಚನ್ನವೀರ ಶಿವಾಚಾರ್ಯರು ಪ್ರಯಾಣಿಸುತ್ತಿದ್ದ ಕಾರ್ ಗೆ ಕಂಟೇನರ್ ಡಿಕ್ಕಿಯಾಗಿರುವ ಘಟನೆ ಬಸವಕಲ್ಯಾಣದ ತಡೋಳಾ ಬಳಿ‌ ನಡೆದಿದೆ.

ಚನ್ನವೀರ ಶಿವಾಚಾರ್ಯರು ಪ್ರಾಣಾಯಪಾಯದಿಂದ‌ ಪಾರಾಗಿದ್ದಾರೆ. ಅವರು ಹಾರಕೂಡದಿಂದ ಚಿಟಗುಪ್ಪಗೆ ಪ್ರಯಾಣಿಸುವಾಗ ಈ ಘಟನೆ ಸಂಭವಿಸಿದೆ.

S (1)

ಹಿಂಬದಿಯಿಂದ‌ ವೇಗವಾಗಿ ಬಂದ ಕಂಟೇನರ್ ಕಾರಿಗೆ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಶ್ರೀಗಳು ಸೇರಿ ಕಾರಿನಲ್ಲಿ ನಾಲ್ಕು ಜನರಿದ್ದರು. ಯಾರಿಗೂ ಅಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.