ಬೀದರ್ : ಪಟ್ಟಣದಲ್ಲಿ ಸುಗಮ ಸಂಚಾರ ಮತ್ತು ರಸ್ತೆ ಅಪಘಾತ ತಡೆ ನಿಯಂತ್ರಣಕ್ಕಾಗಿ ರಸ್ತೆ, ಚರಂಡಿ ಮತ್ತು ಫುಟ್ಪಾತ್ಗಳ ಮೇಲಿನ ಅತಿಕ್ರಮಣ ಶೆಡ್ ಗಳನ್ನು ತೆರವುಗೊಳಿಸಲಾಯಿತು.
ಬೀದರ್ ಜಿಲ್ಲೆಯ ಔರಾದ ಪಟ್ಟಣದಲ್ಲಿ ರಸ್ತೆ, ಚರಂಡಿ ಮತ್ತು ಪುಟ್ಪಾತ್ ಗಳನ್ನು ಅತಿಕ್ರಮಣ ಮಾಡಿರುವ ಸ್ಥಳಗಳನ್ನು ಜೆಸಿಬಿಯಿಂದ ತೆರವುಗೊಳಿಸುವ ಮೂಲಕ ಅಂಗಡಿ ಮಾಲೀಕರಿಗೆ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಮತ್ತು ತಾಲೂಕಾ ದಂಡಾಧಿಕಾರಿಗಳು ಬಿಸಿ ಮುಟ್ಟಿಸಿದರು.

ರಸ್ತೆ ಹಾಗೂ ಫುಟ್ ಪಾತ್ ಸ್ಥಳದಲ್ಲಿ ಶೆಡ್ಗಳನ್ನು ನಿರ್ಮಾಣ ಮಾಡಿ ವ್ಯಾಪಾರ ನಡೆಸುತಿದ್ದ ಅತಿಕ್ರಮಣಕಾರರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ ಪ್ರಸಂಗ ಔರಾದ ಪಟ್ಟಣದಲ್ಲಿ ಜರುಗಿತು.
ಔರಾದ್ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಸ್ವಾಮಿದಾಸ್ ಮತ್ತು ತಹಸಿಲ್ದಾರ ಮಲ್ಲಶೆಟ್ಟಿ ಚಿದ್ರೆ ಅವರ ನೇತೃತ್ವದಲ್ಲಿ ಜೆಸಿಬಿ ಯಂತ್ರದೊಂದಿಗೆ ಕಾರ್ಯಚರಣೆಗೆ ಇಳಿದ ಅಧಿಕಾರಿಗಳು ಪಟ್ಟಣದ ಎಪಿಎಂಸಿ ಮಾರುಕಟ್ಟೆ ಕ್ರಾಸ್ ನಿಂದ ಬಸ್ ನಿಲ್ದಾಣ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿನ ಅತಿಕ್ರಮಣ ತೆರವು ಕಾರ್ಯಚರಣೆ ನಡೆಸಲಾಯಿತು.

