ಬೀದರ್ : ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ನಲ್ಲಿ ರೋಗಿಯನ್ನು ನೋಡಲು ಬಂದ ಎಂಟು ಜನರ ಮಧ್ಯೆ ಜಗಳ ನಡೆದಿದ್ದು, ಪರಸ್ಪರ ಕುರ್ಚಿಯಿಂದ ಹೊಡೆದಾಡಿಕೊಂಡಿದ್ದಾರೆ.

ಹಳೆಯ ದ್ವೇಷದ ಹಿನ್ನಲೆ ನಡೆದ ಜಗಳ ನಡೆದಿರಬಹುದು ಎಂದು ಶಂಕಿಸಲಾಗಿದೆ. ಬ್ರಿಮ್ಸ್ ಎಮರ್ಜೆನ್ಸಿ ವಾರ್ಡ್ ನಲ್ಲಿ ನಡೆದ ಗುಂಪು‌ ಜಗಳದಿಂದ ರೋಗಿಗಳು ಹೆದರಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸ್ ಭೇಟಿ ನೀಡಿದ್ದಾರೆ. ಈ ಸಂಬಂಧ ನಗರದ ನ್ಯೂಟನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ನ್ಯೂಟನ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.