ಬೆಂಗಳೂರು: ನಾಳೆ ಬೆಂಗಳೂರರಿಗೆ ಒಂದು ವಿಸ್ಮಯಕಾರಿ ಸಂಗತಿ ನಡೆಯಲಿದೆ.ತೆ ಏಪ್ರಿಲ್ 24 ಬುಧವಾರದಂದು ಮಧ್ಯಾಹ್ನ 12:17 ರಿಂದ 12:23 ರ ವೇಳೆಗೆ ನಿಮ್ಮ ನೆರಳು ನಿಮಗೆ ಕಾಣಿಸುವುದಿಲ್ಲ. ಅಂದರೆ ಶೂನ್ಯ ನೆರಳಿನ ದಿನ ಸಂಭವಿಸಲಿದೆ. ಈ ವಿದ್ಯಮಾನವನ್ನು ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ ಇರುವ ಪ್ರದೇಶಗಳಲ್ಲಿ ವರ್ಷಕ್ಕೆ ಎರಡು ಬಾರಿ ಗಮನಿಸಬಹುದು. ಈ ಬಾರಿ ಬೆಂಗಳೂರಿನಲ್ಲಿ ಏಪ್ರಿಲ್ 24 ಹಾಗೂ ಆಗಸ್ಟ್ 18 ರಂದು ಈ ಶೂನ್ಯ ನೆರಳಿನ ದಿನ ಸಂಭವಿಸಲಿದೆ ಎನ್ನಲಾಗಿದೆ.
ಬೆಂಗಳೂರಿನ ಕೋರಮಂಗಲದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಈ ಸಂದರ್ಭಕ್ಕಾಗಿ ತನ್ನ ಕ್ಯಾಂಪಸ್ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.
Join us on 24 April to celebrate #ZeroShadowDay #ZSD for locations at #Bengaluru latitude
Measure shadow lengths & check out our cool demos! We will work with Bhopal & Chennai to calculate Earth's diameter and rotation speed!@asipoec @CosmosMysuru @doot_iia @IndiaDST pic.twitter.com/99u9oD3Hy0
— IIAstrophysics (@IIABengaluru) April 22, 2024