ಬೆಂಗಳೂರು: ಖಾಸಗಿ ಯೂಟ್ಯೂಬ್ ವಾಹಿನಿಯ ಮಾಲೀಕನೊಬ್ಬಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಧರ್ಮನಾಯಕನ ತಾಂಡ್ಯದ ಊರ ಹೊರಗಿರುವ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಮಂಜುನಾಥ್(35) ಮೃತ ರ್ದುದೈವಿ. ಸಾವಿಗೂ ಮುನ್ನಾ ಬೆಂಗಳೂರಿನ ಮಂಜುನಾಥ‌ನಗರದಲ್ಲಿರುವ ತನ್ನ ಕಚೇರಿಯಲ್ಲಿ ಫೇಸ್‌ಬುಕ್‌ನಲ್ಲಿ ಲೈವ್ ಬಂದಿದ್ದಾನೆ.‌

ಲೈವ್‌ನಲ್ಲಿ ಪೊಲೀಸರಿಂದ ತನಗಾದ ಅವಮಾನವನ್ನು ತಿಳಿಸಿದ್ದಾನೆ. ಪೊಲೀಸರು ಅಮಾನುಷವಾಗಿ ದೌರ್ಜನ್ಯ ಮಾಡಿದ್ದಾರೆ ಎಂದು ಗೋಳಾಡಿದ್ದಾನೆ. ಅಲ್ಲದೆ‌ ತಾನು ಯಾವ ಯಾವ ಕೆಲಸಗಳನ್ನ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.‌ ಬಳಿಕ ತನ್ನ ಕಚೇರಿಯಲ್ಲೇ ಡೆತ್ ನೋಟ್ ಬರೆದಿಟ್ಟು ‘ನನ್ನ ಸಾವಿಗೆ ಯಾರು ಕಾರಣರಲ್ಲʼ ಎಂದು ಬರೆದಿದ್ದಾರೆ.

ಬಳಿಕ ಸ್ನೇಹಿತರ ಬೈಕ್ ತೆಗೆದುಕೊಂಡು ಬಂದು ಧರ್ಮನಾಯಕನ ತಾಂಡ್ಯದಲ್ಲಿನ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಸದ್ಯ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆಗೆ ಮುಂದಾಗಿದ್ದಾರೆ. ತನಿಖೆಯ ಬಳಿಕವಷ್ಟೆ ಈತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿ‍ದೆ.