News Karnataka Kannada
Monday, May 06 2024
ಬೆಂಗಳೂರು

ನೀವು ಕರ್ನಾಟಕಕ್ಕೆ ಭಿಕ್ಷೆ ಬೇಡಲು ಬಂದಿದ್ದೀರಿ: ವೈರಲ್‌ ಆಯ್ತು ಆಟೋದಲ್ಲಿದ್ದ ಬರಹ

You have come here to beg here in Karnataka: Text on auto goes viral
Photo Credit : News Kannada

ಬೆಂಗಳೂರು: ಇತರ ರಾಜ್ಯಗಳಿಂದ ಉದ್ಯೋಗಕ್ಕಾಗಿ  ಬೆಂಗಳೂರನ್ನು ಆಶ್ರಯಿಸಿರುವ ಅನ್ಯ ಭಾಷಿಕರ ಕುರಿತು ಆಟೋವೊಂದರಲ್ಲಿ ಅಳವಡಿಸಲಾಗಿದ್ದ ಪೋಸ್ಟ್‌ ವೈರಲ್‌ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ನೀವು ಕರ್ನಾಟಕದಲ್ಲಿ ಇದ್ದೀರಿ, ಕನ್ನಡ ಕಲಿಯಿರಿ. ನಿಮ್ಮ ಧೋರಣೆಯನ್ನು ನಮಗೆ ಹೇರಲು ಬರಬೇಡಿ. ಯೂ f***. ನೀವು ಇಲ್ಲಿ ಭಿಕ್ಷೆ ಬೇಡಲು ಬಂದಿದ್ದೀರಿ ಎಂದು ಆಟೋದ ಹಿಂಭಾಗದಲ್ಲಿ ಸಾಲುಗಳಿದ್ದವು. ಈ ಪೋಸ್ಟ್‌ ಈಗ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಕಾಸ್ಮೋಪಾಲಿಟಿನ್‌ ಸಂಸ್ಕೃತಿಗೆ ಹೆಸರಾದ ಬೆಂಗಳೂರಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಚಿತ್ರವನ್ನು ಹಂಚಿಕೊಂಡಿರುವ ರೋಷನ್ ರೈ, ಪ್ರಾದೇಶಿಕತೆಯನ್ನು ಸಮರ್ಥನೆ ಮಾಡಿಕೊಳ್ಳುವ ವೇಳೆ ಇತರ ರಾಜ್ಯಗಳ ಜನರನ್ನು ಮೂರನೇ ದರ್ಜೆಯ ನಾಗರಿಕರನ್ನಾಗಿ ಪರಿಗಣಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬ ಜಾಲತಾಣ ಬಳಕೆದಾರ ವಾಹನದ ನೋಂದಣಿ ಸಂಖ್ಯೆಯೂ ಗೋಚರಿಸುವ ರೀತಿಯಲ್ಲಿ ಚಿತ್ರ ತೆಗೆಯಬೇಕಿತ್ತು ಎಂದು  ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಇದು ಫೋಟೋಶಾಪ್ ಮಾಡಿದ ಕ್ಲಿಕ್ ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು