ಬೆಂಗಳೂರು: ಕನ್ನಡ ಬಿಗ್ಬಾಸ್ ಸೀಸನ್ 11 ಆರಂಭವಾಗಿ ಒಂದುವಾರವಾಗಿದೆ ಇಂದು ವಾರದ ಕಥೆ ಕಿಚ್ಚನ ಜೊತೆ ನಡೆಯುತ್ತಿದೆ. 17 ಜನ ಇರುವ ಮನೆಯಿಂದ ಮೊದಲು ಔಟ್ ಆಗೋದು ಯಾರು ಎಂಬ ಕುತೂಹಲ ಕೂಡ ಹೆಚ್ಚಿದೆ. ಸ್ವರ್ಗ-ನರಕದ ಮನೆಯಲ್ಲಿ ಯಾರು ಉಳಿಯುತ್ತಾರೆ. ಯಾರು ಹೋಗುತ್ತಾರೆ ಎಂಬುದು ಸದ್ಯದ ಪ್ರಶ್ನೆ. ಈ ನಡುವೆ ಲಾಯರ್ ಜಗದೀಶ್ ಒಂದು ವಾರದಲ್ಲಿ ಸಖತ್ ಸೌಂಡ್ ಮಾಡಿದ ಸ್ಪರ್ಧಿಯಾಗಿದ್ದು, ಅವರಿಗೆ ಕ್ಲಾಸ್ ತೆಗೆದುಕೊಳ್ಳಬೇಕೆಂದು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯ ಕೇಳಿ ಬಂದಿತ್ತು.
ಇಂದು ಈ ಸೀಸನ್ನ ಮೊದಲ ವಾರದ ಪಂಚಾಯ್ತಿ ನಡೆದಿದ್ದು, ಸುದೀಪ್, ಲಾಯರ್ ಜಗದೀಶ್ಗೆ ಖಡಕ್ ಆಗಿ ಪ್ರತ್ಯುತ್ತರ ನೀಡಿದ್ದಾರೆ. ನಿಮ್ಮಪ್ಪನಾಣೆ ಬಿಗ್ಬಾಸ್ ಅನ್ನು ಹಾಳುಮಾಡಲಾರಿರಿ ಎಂದಿದ್ದಾರೆ ಸುದೀಪ್.

