ಆನೇಕಲ್:‌ ಅಪಾರ್ಟ್ಮೆಂಟ್‌ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವನ್ನಪ್ಪಿದ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿ ವರ್ತೂರು ರಸ್ತೆ ಬಳಿ ನಡೆದಿದೆ.

ಮನ ಸ್ಕಂದ ಬಹುಮಹಡಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ವೇಳೆ ಒಳಚರಂಡಿ ಕಾಮಗಾರಿ ಕೆಲಸಕ್ಕೆ ಹೋಗಿದ್ದ 45 ವರ್ಷದ ಕೂಲಿ ಕಾರ್ಮಿಕ ತಿಗಳ ಚೌಡದೇನಹಳ್ಳಿ ನಿವಾಸಿ ಚಿದಂಬರಂ ಸಾವನ್ನಪ್ಪಿದ್ದಾರೆ. ಒಳಚರಂಡಿ ಮಣ್ಣು ತೆಗೆಯುತ್ತಿದ್ದಾಗ ಮಣ್ಣು ಕುಸಿದು ಕಾಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಅಗ್ನಿಶಾಮಕ ದಳ ಪೊಲೀಸ್ ಭೂಮಿ ಒಳಗಡೆ ಮಣ್ಣಲ್ಲಿ ಹೂತು ಹೋಗಿರುವ ಚಿದಂಬರಂ ಎಂಬ ವ್ಯಕ್ತಿಯ ಶವ ಹೊರ ತೆಗೆದು ವೈದೇಹಿ ಆಸ್ಪತ್ರೆಗೆ ಕಳಿಸಲಾಗಿದೆ. ವರ್ತೂರು ಪೊಲೀಸರು ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಮಹಜರ್ ಪ್ರಕ್ರಿಯೆ ಮಾಡಿದಾರೆ.

ಈ ಘಟನೆ ನಡೆದಿದ್ದು ನಿನ್ನೆ ಸಂಜೆ ಸುಮಾರು 4:30ರ ವೇಳೆಗೆ ಆದರೂ ರಾತ್ರಿ 8:30 ರವರೆಗೂ ಸ್ಥಳಕ್ಕೆ ಬಿಲ್ಡರ್ ಕಿಶೋರ್ ರೆಡ್ಡಿ, ಮತ್ತು ಸಂಬಂಧಪಟ್ಟ ಯಾವ ಬಿಲ್ಡರ್ ಕೂಡಾ ಬರಲಿಲ್ಲ ಎಂದು ಮೃತ ಚಿದಂಬರಂ ಅವರ ತಮ್ಮ ಮುನಿಯಪ್ಪ ಹಾಗೂ ಸಂಬಂಧಿಕರು ಆರೋಪ ಮಾಡಿದ್ದಾರೆ.