ಬೆಂಗಳೂರು: ಇಂದಿನಿಂದ ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲ ಅಧಿವೇಶನ ಆರಂಭ ಆಗಲಿದೆ. ಬೆಳಗಾವಿಯಲ್ಲಿ ನಡೆಯುವ 12ನೇ ಅಧಿವೇಶನಕ್ಕೆಎಲ್ಲಾ ರೀತಿಯ ಸಿದ್ದತೆಯನ್ನು ಬೆಳಗಾವಿ ಜಿಲ್ಲಾಡಳಿತ ಸಂಪೂರ್ಣವಾಗಿ ಮಾಡಿಕೊಂಡಿದೆ.
ಮಂತ್ರಿಗಳು, ಶಾಸಕರು, ಅಧಿಕಾರಿ ವರ್ಗ, ಪೊಲೀಸ್ ಸಿಬ್ಬಂದಿ ಹೀಗೆ ಪ್ರತಿಯೊಬ್ಬರಿಗೂ ವಾಸ್ತವ್ಯದ ವ್ಯವಸ್ಥೆ ಜೊತೆಗೆ ಊಟದ ವ್ಯವಸ್ಥೆ ಕೂಡ ಆಗಿದೆ. ಇತ್ತ ಈ ಬಾರಿಯೂ ಪ್ರತಿಭಟನೆಗಳ ಕಾವು ಸರ್ಕಾರ ತಟ್ಟಲ್ಲಿದ್ದು ಜೊತೆಗೆ ಎಂಇಎಸ್ ಮತ್ತೆ ಕ್ಯಾತೆ ತೆಗೆದಿದ್ದು ಪೊಲೀಸರು ಖಡಕ್ ವಾರ್ನ್ ಕೊಟ್ಟಿದ್ದಾರೆ. ಸುವರ್ಣ ವಿಧಾನಸೌಧದ ಒಂದು ಕಿಮೀ ವ್ಯಾಪ್ತಿಯಲ್ಲಿ ಸುತ್ತಮುತ್ತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.