ಬೆಂಗಳೂರು: ಸರ್ಕಾರದ ವಿರುದ್ಧ ಸೆಪ್ಟೆಂಬರ್ 11ಕ್ಕೆ ಬೆಂಗಳೂರು ಬಂದ್ಗೆ ಕರೆ ನೀಡಿರುವ ಖಾಸಗಿ ಸಾರಿಗೆ ಒಕ್ಕೂಟಗಳು ಸಿಡಿದೆದ್ದಿವೆ. ಸೆಪ್ಟೆಂಬರ್ 11ಕ್ಕೆ 32 ಖಾಸಗಿ ಸಾರಿಗೆ ಒಕ್ಕೂಟಗಳು ಬೆಂಗಳೂರು ಬಂದ್ ಗೆ ಕರೆ ನೀಡಿವೆ.
ಸರ್ಕಾರದ ಶಕ್ತಿ ಯೋಜನೆ ಜಾರಿ ಬಳಿಕ ಖಾಸಗಿ ಸಾರಿಗೆ ಸಂಕಷ್ಟ ಸಿಲುಕಿವೆ. ಖಾಸಗಿ ಸಾರಿಗೆ ಒಕ್ಕೂಟ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಲಿಲ್ಲ. ಹೀಗಾಗಿ ಸರ್ಕಾರ ವಿರುದ್ದ ಖಾಸಗಿ ಸಾರಿಗೆ ಸಮರ ಸಾರಿವೆ.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಸಾರಿಗೆ ಒಕ್ಕೂಟಗಳು ನಡೆಸುತ್ತಿರುವ ಬೆಂಗಳೂರು ಬಂದ್ಗೆ ಓಲಾ ಊಬರ್ ಚಾಲಕರು ಮತ್ತು ಮಾಲೀಕರ ಸಂಘ ಬೆಂಬಲ ಸೂಚಿಸಿದೆ. ಪರಿಣಾಮ ಸೆಪ್ಟೆಂಬರ್ 11ರಂದು ಆಟೋ, ಟ್ಯಾಕ್ಸಿ, ಓಲಾ, ಊಬರ್ ಓಡಾಟ ಸ್ತಬ್ಧವಾಗಲಿದೆ. ಭಾನುವಾರ ರಾತ್ರಿ 12 ಗಂಟೆಯಿಂದಲೇ ಸೇವೆ ಬಂದ್ ಆಗಲಿದೆ.
ನಾಳೆ ಬೆಂಗಳೂರಿನಲ್ಲಿ ಏನಿರಲ್ಲ?
ಖಾಸಗಿ ಬಸ್ ಸೇವೆ
ಓಲಾ ಆಟೋ, ಟ್ಯಾಕ್ಸಿ
ಉಬರ್ ಆಟೋ, ಟ್ಯಾಕ್ಸಿ
ಏರ್ ಪೋರ್ಟ್ ಟ್ಯಾಕ್ಸಿ
ಗೂಡ್ಸ್ ವಾಹನಗಳು
ಶಾಲಾ ವಾಹನಗಳು
ಸಿಟಿ ಟ್ಯಾಕ್ಸಿ
ಕಾರ್ಪೋರೇಟ್ ಕಂಪನಿ ಬಸ್
ನಾಳೆ ಬೆಂಗಳೂರಿನಲ್ಲಿ ಏನಿರುತ್ತೆ?
ಕೆಎಸ್ಆರ್ಟಿಸಿ ಬಸ್
ಬಿಎಂಟಿಸಿ ಬಸ್