ಬೆಂಗಳೂರು : ದರ ಏರಿಕೆಯ ಹೊರೆ ಹಾಕಿರುವ ಸರ್ಕಾರ ಇದೀಗ ಮತ್ತೊಂದು ಶಾಕ್ ನೀಡಿದೆ. ಕುಡಿಯುವ ನೀರಿನ ದರ ಏರಿಕೆ ಮಾಡಿರುವ ಜಲ ಮಂಡಳಿ, ನಾಳೆಯಿಂದಲೇ ಪರಿಷ್ಕೃತ ದರ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

ಈ ಕುರಿತು ಮಾಹಿತಿ ಮಾಹಿತಿ ಹಂಚಿಕೊಂಡಿರುವ ಜಲಮಂಡಳಿ ಅಧ್ಯಕ್ಷ ರಾಮ ಪ್ರಸಾತ್ ಮನೋಹರ್ 2014 ರಿಂದಲೂ ನೀರಿನ ದರ ಏರಿಕೆ ಮಾಡಿಲ್ಲ. ಇದೀಗ ದರ ಏರಿಕೆ ಮಾಡುವ ಅನಿವಾರ್ಯತೆ ಎದುರಾಗಿದ್ದು ಕುಡಿಯುವ ನೀರಿನ ದರ ಏರಿಸಲಾಗುತ್ತಿದೆ ಎಂದಿದ್ದಾರೆ.

ಗೃಹ ಬಳಕೆಯ ನೀರು ಸರಬರಾಜಿನ ದರವನ್ನು 1 ಪೈಸೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದ್ದು 8 ಲೀಟರ್ ಒಳಗಿನ ನೀರು ಸರಬರಾಜಿಗೆ 0.15 ಪೈಸೆ ಹೆಚ್ಚಳ ಮಾಡಲಾಗುತ್ತಿದೆ. 8 ರಿಂದ 25 ಸಾವಿರ ಲೀಟರ್ ಗೆ 0.40 ಪೈಸೆ ಹೆಚ್ಚಳ ಮಾಡಲಾಗುತ್ತಿದೆ. 25 ಸಾವಿರದಿಂದ 55 ಸಾವಿರ ಲೀಟರ್ ವರೆಗೆ 0.80 ಪೈಸೆ ಏರಿಕೆ ಮಾಡಲಾಗುತ್ತದೆ. 55 ಸಾವಿರದಿಂದ 1 ಲಕ್ಷದವರೆಗೆ 1 ಪೈಸೆ ಹೆಚ್ಚಳ ಮಾಡಲಾಗುತ್ತದೆ ಎಂದಿದ್ದಾರೆ

ಇನ್ಮುಂದೆ ಪ್ರತಿ ವರ್ಷ ಏಪ್ರಿಲ್ ನಲ್ಲಿ ನೀರಿನ ದರ ಪರಿಷ್ಕರಣೆ ಮಾಡಲಾಗುವುದು ಎಂಬುದಾಗಿ ಮಾಹಿತಿ ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್‌ ಹೇಳಿದ್ದಾರೆ.