ಬೆಂಗಳೂರು: ಯೂಟ್ಯೂಬ್‌ನಲ್ಲಿ ಕಳ್ಳತನದ ವಿಡಿಯೋಗಳನ್ನು ನೋಡಿ ಮೊಬೈಲ್ ಶಾಪ್‌ಗಳಿಗೆ ಕನ್ನ ಹಾಕುತ್ತಿದ್ದ ಬಿಸಿಎ ಪದವೀಧರನನ್ನು ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ತಿರುವಣ್ಣಾಮಲೈ ಮೂಲದ ಸತೀಯಾ ಅಲಿಯಾಸ್ ಸತ್ಯ ಬಂಧಿತ ಆರೋಪಿಯಾಗಿದ್ದು, ಈತನಿಂದ 11 ಮೊಬೈಲ್‌ಗಳು, 9 ಲ್ಯಾಪ್‌ಟಾಪ್‌ಗಳು ಮತ್ತು 2 ಟ್ಯಾಬ್‌ಗಳು ಸೇರಿದಂತೆ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸೀಜ್ ಮಾಡಲಾಗಿದೆ.

ಎಚ್‌ಎಸ್‌ಆರ್ ಲೇಔಟ್ ವ್ಯಾಪ್ತಿಯಲ್ಲಿ ವೆಂಕಟೇಶ್ ಎಂಬುವರ ಮೊಬೈಲ್ ಶೋರೂಂ ಬೀಗ ಮುರಿದು ನಡೆದಿದ್ದ ದರೋಡೆ ಪ್ರಕರಣದ ಜಾಡು ಹಿಡಿದ ಪೊಲೀಸರು ಸಸ್ಯಾಹಾರಿಯಂತೆ ನಟಿಸುತ್ತಿದ್ದ ಖದೀಮನನ್ನು ಹೆಡೆಮುರಿ ಕಟ್ಟಿದ್ದಾರೆ.