ಬೆಂಗಳೂರು: ವಿಜಯ್​ ಸೇತುಪತಿ ನಟನೆಯ’ʻವಿಡುತಲೈ 2ʼ ಫಸ್ಟ್‌ ಲುಕ್‌ ಬಿಡುಗಡೆಗೊಂಡಿದೆ.ಪ್ರಚಾರದ ಮೊದಲ ಹಂತವಾಗಿ ಸಿನಿಮಾದ ಫಸ್ಟ್ ಲುಕ್‌ನ ಎರಡು ಪೋಸ್ಟರ್‌ನ್ನು ಅನಾವರಣಗೊಳಿಸಲಿದ್ದಾರೆ. ಎರಡು ಲುಕ್‌ಗಳಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ.

ತಾರಾಗಣದಲ್ಲಿ ವಿಜಯ್ ಸೇತುಪತಿ, ಸೂರಿ, ಮಂಜುವಾರಿಯರ್, ಅನುರಾಗ್ ಕಶ್ಯಪ್, ಕಿಶೋರ್, ಗೌತಂ ವಾಸುದೇವ್‌ಮೆನನ್, ರಾಜೀವ್ ಮೆನನ್, ಚೇತನ್ ಮುಂತಾದವರು ನಟಿಸಿದ್ದಾರೆ. ಸಂಗೀತ ಇಳಯರಾಜ, ಛಾಯಾಗ್ರಹಣ ಆರ್.ವೆಲ್ವರಾಜ್, ಕಲೆ ಜಾಕಿ, ಸಂಕಲನ ರಮರ್, ವಸ್ರ್ತಾಂಲಕಾರ ಉತ್ತರ ಮೆನನ್, ಸಾಹಸ ಪೀಟರ್ ಹೈನ್-ಸ್ವಂಟ್ ಶಿವ, ವಿಎಫ್‌ಎಕ್ಸ್ ಆರ್.ಹರಿಹರಸುಧನ್ ಅವರದಾಗಿದೆ.