ಬೆಂಗಳೂರು: ‘ನಾನು ನಂದಿನಿ ಬೆಂಗಳೂರಿಗ್ ಬಂದಿನಿ’ ಖ್ಯಾತಿಯ ವಿಕಾಸ್‌ಗೆ ಸಂಕಷ್ಟ ಎದುರಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಕ್ಕಿಪೀಡಿಯಾ ವಿಕಾಸ್ ಅವರು ಹೊಸ ಹೊಸ ವಿಡಿಯೋಗಳನ್ನ ಪ್ರೊಡ್ಯೂಸ್ ಮಾಡ್ತಾ ಇರ್ತಾರೆ.
ಕಾಂಟ್ರವರ್ಸಿ, ಟ್ರೆಂಡಿಂಗ್, ಪೊಲಿಟಿಕಲ್ ಡ್ರಾಮಾ ಹೀಗೆ ಸೊಸೈಟಿಯಲ್ಲಿ ಏನೇ ಡೆವಲಪ್ಮೆಂಟ್ ಆದ್ರು ತಮ್ಮದೇ ಸ್ಟೈಲ್ನಲ್ಲಿ ಅದಕ್ಕೊಂದು ವಿಶೇಷವಾದ ಕಂಟೆಂಟ್ ಕ್ರಿಯೇಟ್ ಮಾಡೋದು ವಿಕಿಪೀಡಿಯ ಹವ್ಯಾಸ. ಈ ಹಿಂದೆ ಸಿಲಿಕಾನ್ ಸಿಟಿಯಲ್ಲಿ ಜನರು ನೀರಿನ ಮೊರೆ ಹೋಗಿದ್ದಾಗ ಕರಿಮಣಿ ಮಾಲೀಕ ಹಾಡಿಗೆ ಓನಲ್ಲ ನೀರಿಲ್ಲ ಎಂದು ರೀಲ್ಸ್ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಇದೀಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ಸ್ವೊಂದನ್ನು ಶೇರ್ ಮಾಡಿಕೊಂಡು ವಿಕ್ಕಿಪೀಡಿಯಾ ವಿಕಾಸ್ ಫಜೀತಿಗೆ ಸಿಕ್ಕಿಹಾಕಿಕೊಂಡಿದ್ದಾರೆ.
ವಿಕಾಸ್‌ಗೆ ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ವಿಕ್ಕಿಪೀಡಿಯಾ ವಿಕಾಸ್ ಡ್ರಗ್ಸ್ (ಮಾದಕ ವಸ್ತು ವ್ಯಸನ) ವಿಚಾರಕ್ಕೆ ಸಂಬಂಧಿಸಿದಂತ ರೀಲ್ಸ್ವೊಂದನ್ನು ಶೇರ್ ಮಾಡಿಕೊಂಡಿದ್ದರು. ಇದೇ ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೀಗೆ ವೈರಲ್ ಆದ ವಿಡಿಯೋವನ್ನು ನೋಡಿದ ಪೊಲೀಸರು ವಿಕ್ಕಿಪೀಡಿಯಾ ವಿಕಾಸ್ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ವಿಕ್ಕಿಪೀಡಿಯಾ ವಿಕಾಸ್ ಅವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

