ಬೆಂಗಳೂರು: ವೈದ್ಯಕೀಯ, ಎಂಜಿನೀಯರಿಂಗ್​ ಸೇರಿದಂತೆ ಇತರ ವೃತ್ತಿಪರ ಕೋರ್ಸ್​​ಗಳ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಅಭ್ಯರ್ಥಿಗಳು ತಮ್ಮ ಇಚ್ಛೆಯ ಚಾಯ್ಸ್  ದಾಖಲು ಮಾಡುತ್ತಿದ್ದಾರೆ. ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಿ ಪ್ರವೇಶ ಪತ್ರ ಡೌನ್​ಲೋಡ್​ ಮಾಡಿಕೊಂಡಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ಇದೇ ಮೊದಲ ಬಾರಿಗೆ ಆನ್ ಲೈನ್ ಪಾವತಿ ಜಾರಿ ಮಾಡಿದೆ.

ಕೆಇಎ ಇದೇ ಮೊದಲ ಬಾರಿಗೆ ಇಂಟರ್ ನೆಟ್​ ಬ್ಯಾಂಕಿಂಗ್​, ಡೆಬಿಟ್​/ ಕ್ರೆಡಿಟ್​ ಕಾರ್ಡ್ ಶುಲ್ಕ ಪಾವತಿಸುವುದಕ್ಕೂ ಅವಕಾಶ ಕಲ್ಪಿಸಿರುವುದರಿಂದ ಇಡೀ ಪ್ರಕ್ರಿಯೆ ಸರಳವಾಗಿದೆ.​ ಯುಜಿಸಿಇಟಿ-ನೀಟ್​ ಕೋರ್ಸ್​ಗಳಿಗೆ​ ಮೊದಲ ದಿನವೇ 16 ಸಾವಿರಕ್ಕೂ ಮಂದಿ ತಮ್ಮ ಇಚ್ಛೆಯ ಚಾಯ್ಸ್​ ದಾಖಲು ಮಾಡಿದ್ದಾರೆ. 3000ಕ್ಕೂ ಹೆಚ್ಚು ಮಂದಿ ಶುಲ್ಕ ಪಾವತಿ ಮಾಡಿ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.