ಬೆಂಗಳೂರು: ಮುಸ್ಲಿಂರ ಪವಿತ್ರ ಸ್ಥಖವಾದ ಮೆಕ್ಕಾದಲ್ಲಿನ ಹಜ್ ಯಾತ್ರೆ ಸಮಯದಲ್ಲಿ ಗರಿಷ್ಠ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿಗೆ ದಾಖಲಾದ ಪರಿಣಾಮ ಸುಮಾರು 600ಕ್ಕೂ ಯಾತ್ರಿಗಳ ಪೈಕಿ 68 ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ. ಅದರಲ್ಲಿ ಬೆಂಗಳೂರು ಮೂಲದ ಇಬ್ಬರು ಸಹ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಬಕ್ರೀದ್ ಹಬ್ಬ ಪ್ರಯುಕ್ತ ಹಜ್ ಯಾತ್ರೆಗೆ ಹೋಗಿದ್ದರು ಎನ್ನಲಾಗಿದೆ.
ಬೆಂಗಳೂರು ಮೂಲದ ಇಬ್ಬರು ಯಾತ್ರಿಕರೂ ಮೆಕ್ಕಾದಿಂದ 8 ಕಿ.ಮೀ ದೂರವಿರುವಾಗಲೇ ಸಾನ್ನಪ್ಪಿದ್ದಾರೆ. ಮೃತರನ್ನು ಕೌಸರ್ ರುಕ್ಸಾನ್ (69) ಮತ್ತು ಮೊಹಮ್ಮದ್ ಇಲಿಯಾಸ್ (50) ಎಂದು ಗುರುತಿಸಲಾಗಿದೆ.

