ತುಮಕೂರು

ತುಮಕೂರು: ಮಾಜಿ ಸಚಿವ ವಾಸಣ್ಣ ನನ್ನ ಅಣ್ಣನಿದ್ದಂತೆ- ಯೋಗಾನಂದ ಕುಮಾರ್

ಗುಬ್ಬಿ: ಪಕ್ಷ ಸಿದ್ಧಾಂತಗಳಲ್ಲಿ ಬಿನ್ನಾಭಿಪ್ರಾಯ ಇರುವಂತೆ ಪ್ರಾದೇಶಿಕ ಪಕ್ಷ ಜೆಡಿಎಸ್ ಆದರ್ಶಗಳನ್ನು ಮೈಗೂಡಿಸಿಕೊಂಡ ನಾನು ಪಕ್ಷ ಬದಲಾಯಿಸದೆ ಜೆಡಿಎಸ್ ನಲ್ಲೇ ಉಳಿದು ವಾಸಣ್ಣ ಸ್ವಂತ ಅಣ್ಣನಂತೆ, ಅವರ ಪತ್ನಿ ಅತ್ತಿಗೆ ರೀತಿ ಕಂಡಿದ್ದೇನೆ. ರಾಜಕೀಯ ಬೆಳವಣಿಗೆಗೆ ಕಾರಣಕರ್ತರಾದ ಅವರನ್ನು ಅಭಿನಂದಿಸಿ ಬೀಳ್ಕೊಟ್ಟು ನಾನು ಜೆಡಿಎಸ್ ನಲ್ಲೇ ಇದ್ದು ಪ್ರಾದೇಶಿಕ ಪಕ್ಷದ ಅಧಿಕಾರ ರಾಜ್ಯದಲ್ಲಿ ಸ್ಥಾಪಿಸುವ ಕೆಲಸಕ್ಕೆ ನಿರಂತರ ಹೋರಾಟ ಮಾಡುವುದಾಗಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಯೋಗಾನಂದಕುಮಾರ್ ತಿಳಿಸಿದರು.

ತಾಲ್ಲೂಕಿನ ದೊಡ್ಡಗುಣಿ ಪಂಚಾಯಿತಿಯಲ್ಲಿ ನಡೆದ ಜೆಡಿಎಸ್ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಸುದ್ದಿಗಾರರ ಜೊತೆ ಮಾತನಾಡಿದ ಅವರು ಹಿಂದುಳಿದ ವರ್ಗಗಳಿಗೆ ಶಕ್ತಿ ನೀಡಿದ ಜೆಡಿಎಸ್ ನಮ್ಮ ತಿಗಳ ಸಮುದಾಯಕ್ಕೆ ರಾಜಕೀಯ ಶಕ್ತಿ ನೀಡಿದೆ. ತುಮಕೂರು ನಗರದಲ್ಲಿ ಹತ್ತು ನಗರಸಭಾ ಸದಸ್ಯರ ಕೊಡುಗೆ ನೀಡಿ, ಜಿಲ್ಲಾ ಪಂಚಾಯಿತಿ, ಆಯೋಗದಲ್ಲಿ ಕೂಡಾ ಸ್ಥಾನ ನೀಡಿದ ಹೆಗ್ಗಳಿಕೆ ದೇವೇಗೌಡರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಜೆಡಿಎಸ್ ರಾಜ್ಯದಲ್ಲಿ ಚುಕ್ಕಾಣಿ ಹಿಡಿಯಲಿದೆ. ಈ ಕಾರ್ಯಕ್ಕೆ ಗುಬ್ಬಿಯಲ್ಲಿ ಜೆಡಿಎಸ್ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಜೆಡಿಎಸ್ ನಲ್ಲೇ ಉಳಿದ ವಿಷಯ ತಿಳಿಸಿದ ಸಂದರ್ಭದಲ್ಲಿ ತಿಗಳ ಜನಾಂಗಕ್ಕೆ ಎಂ ಎಲ್ ಸಿ ಸ್ಥಾನಮಾನ ನೀಡುವ ಭರವಸೆ ನೀಡಿದರು. ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿಮ್ಮ ಸಮಾಜಕ್ಕೆ ಸೂಕ್ತ ಅವಕಾಶ ಮುಂದಿನ ದಿನಗಳಲ್ಲಿ ನೀಡುವ ಭರವಸೆ ಸಹ ನೀಡಿರುವ ಬಗ್ಗೆ ವಿವರಿಸಿದ ಅವರು ಉಚಿತ ಆರೋಗ್ಯ ಮತ್ತು ಶಿಕ್ಷಣ ಇದರ ಮಹತ್ವ ಅರಿತು ಗ್ರಾಮೀಣ ಜನರಿಗೆ ಅವಕಾಶ ಮಾಡಿಕೊಡುವ ಪಂಚರತ್ನ ಯೋಜನೆ ಸರ್ವ ಜನಾಂಗಕ್ಕೂ ಹತ್ತಿರವಾಗಿದೆ. ರೈತಪರ ನಿಂತ ಜೆಡಿಎಸ್ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದೆ. ಸಾಲಮನ್ನಾ, ಹೆಚ್ಚಿನ ಪಿಂಚಣಿ ಯೋಜನೆ, ಕೃಷಿಗೆ ಪ್ರೋತ್ಸಾಹ ಧನ ಹೀಗೆ ಅನೇಕ ವಿಚಾರ ಜನಪರವಾಗಿದೆ ಎಂದ ಅವರು ಕಾಂಗ್ರೆಸ್ ಒಂದು ಕೋಮು ಪರ ನಿಂತರೆ, ಅದನ್ನೇ ಬಂಡವಾಳ ಮಾಡಿಕೊಂಡ ಬಿಜೆಪಿ ಕೋಮು ಗಲಭೆ ಮಾಡಿ ಮತ ಪಡೆಯುವ ಕೆಲಸ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಮಾತನಾಡಿ ಕ್ಷೇತ್ರದ ಎಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್ ಪರ ಅಲೆ ಎದ್ದಿದೆ. ಸ್ವಯಂ ಪ್ರೇರಿತವಾಗಿ ಮತದಾರರು ಜೆಡಿಎಸ್ ಗೆ ಮತ ನೀಡುವ ಭರವಸೆ ನೀಡುತ್ತಿದ್ದಾರೆ. ಕುಮಾರಣ್ಣ ಅವರ ಪಂಚರತ್ನ ಯೋಜನೆ ಪ್ರತಿ ಮನೆ ಬಾಗಿಲಿಗೆ ತಲುಪಿದೆ. ಅದರ ಮಹತ್ವಾಕಾಂಕ್ಷೆ ಜನಮನ ಗೆದ್ದಿದೆ. ಈ ಜೊತೆಗೆ ತಾಲ್ಲೂಕಿನ 16 ಸಾವಿರ ರೈತ ಕುಟುಂಬಕ್ಕೆ ಸಾಲ ಮನ್ನಾ ಅನುಕೂಲ ದೊರಕಿದೆ. ಈ ಫಲಾನುಭವಿಗಳು ಸಹ ನನಗೆ ಕರೆ ಮಾಡಿ ಮತ ನೀಡುವ ಭರವಸೆ ನೀಡಿದ್ದಾರೆ. ದಿನ ಕಳೆದಂತೆ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿದೆ. ಸಾವಿರಾರು ಸಂಖ್ಯೆಯಲ್ಲಿ ಪ್ರಚಾರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಂಚಲದೊರೆ ಗ್ರಾಪಂ ಮಾಜಿ ಅಧ್ಯಕ್ಷ ಜಿ.ಎಂ.ಶಿವಲಿಂಗಯ್ಯ, ಮುಖಂಡರಾದ ಇಡಗೂರು ರವಿ, ಗಂಗಾಧರ್, ಯೋಗೀಶ್ , ಗ್ರಾಪಂ ಉಪಾಧ್ಯಕ್ಷ ರಾಜಣ್ಣ, ಹಂಡನಹಳ್ಳಿ ಗಂಗಣ್ಣ, ಸದಾನಂದ್, ನಾಗರಾಜು, ಬಸವರಾಜು, ಯಲ್ಲಾಪುರ ಗಂಗಣ್ಣ, ಶಿವಾನಂದ್ ಇತರರು ಇದ್ದರು.

Gayathri SG

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

3 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

3 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

4 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

4 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

4 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

4 hours ago