Categories: ತುಮಕೂರು

ತುಮಕೂರು: ವಿಧಾನಸಭೆ ಚುನಾವಣೆ ಪ್ರಯುಕ್ತ ಚುನಾವಣಾ ರಾಯಭಾರಿಗಳ ನೇಮಕ

ತುಮಕೂರು: ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ ವತಿಯಿಂದ ರಾಯಭಾರಿಗಳ ಆಯ್ಕೆ ಸಭೆ ಹಾಗೂ ವಿಶೇಷಚೇತನರು ತೃತೀಯ ಲಿಂಗಿಗಳ ಜಾಗೃತ ಸಮಿತಿ ಸಭೆ ನಡೆಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ಅವರು, ಮಾತನಾಡಿ, ರಾಯಭಾರಿಗಳನ್ನು ಆಯ್ಕೆ ಮಾಡುವಾಗ ಒತ್ತಡಕ್ಕೆ ಒಳಗಾಗದಿದ್ದರೆ ಒಳ್ಳೊಳ್ಳೆ ರತ್ನ ರಾಯಭಾರಿ ಗಳನ್ನು ಆಯ್ಕೆ ಮಾಡಬಹುದು. ಇದಕ್ಕೆ ಜಿಲ್ಲೆಯಿಂದ ಈ ಬಾರಿ ಉತ್ತಮ ವ್ಯಕ್ತಿ ಗಳನ್ನು ಆಯ್ಕೆ ಮಾಡಿರುವುದೇ ನಿದರ್ಶನ ಎಂದರು.

ಜಿಲ್ಲೆಯಿಂದ ಈ ಬಾರಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕ, ಕಲಾಶ್ರೀ ಲಕ್ಷ್ಮಣ ದಾಸ್, ದೂರದರ್ಶನ ಕಲಾವಿದ ಕಂಬಂದರಂಗಯ್ಯ, ಗಾಯಕ ಮೋಹನ್ ಕುಮಾರ್, ಲಿಲ್ಲಿ, ಮಂಜಮ್ಮ ರತ್ನಮ್ಮ ಅವರನ್ನು ಮತದಾನ ಜಾಗೃತಿ ರಾಯಭಾರಿ ಗಳಾಗಿ ಆಯ್ಕೆ ಮಾಡಲಾಗಿದ್ದು, ಇವರೆಲ್ಲ ತಮ್ಮ ತಮ್ಮ ಕ್ಷೇತ್ರದಲ್ಲಿ ಅದ್ಬುತ ಸಾಧನೆ ಮಾಡಿದವರು. ಇವರ ಪ್ರೇರಣೆ, ಸ್ಫೂರ್ತಿಯಿಂದ ಜಿಲ್ಲೆಯಲ್ಲಿ ಈ ಬಾರಿ ಅತ್ಯಧಿಕ ಮತದಾನ ದಾಖಲಾಗಬೇಕೆಂದು ಆಶಿಸುವುದಾಗಿ ತಿಳಿಸಿದರು.

ಮತದಾನ ಹಬ್ಬದಂತೆ ಆಚರಣೆಯಾಗಬೇಕು. ಪ್ರತಿಯೊಬ್ಬರು ಮತಗಟ್ಟೆ ಗೆ ಬಂದು ಮತ ಚಲಾಯಿಸಬೇಕು. ತೀರಾ ಅಶಕ್ತರಿಗೆ ಮಾತ್ರ ಅಂಚೆ ಮತದಾನದ ಅವಕಾಶ ಕಲ್ಪಿಸಲಾಗಿದೆ. ನಗರ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಕುಸಿಯುತ್ತಿದ್ದು ವಿದ್ಯಾವಂತರೇ ಮತದಾನದಿಂದ ಹೊರಗುಳಿಯುತ್ತಿರುವುದು ದುರಂತ ಎಂದರು. ಜಿಪಂ ಸಿಇಓ ಡಾ. ವಿದ್ಯಾಕುಮಾರಿ ಅವರು ಮಾತನಾಡಿ ಸ್ವೀಪ್ ಸಮಿತಿಯಿಂದ ಪ್ರತೀ ಗ್ರಾಮ ಮಟ್ಟದಲ್ಲೂ ಮತದಾನ ಜಾಗೃತಿ ಮಾಡುತ್ತಿದ್ದು, ಸಾಮಾಜಿಕ ಸೇವೆ ಮಾಡಿದವರು, ಸಾಂಸ್ಕೃತಿಕ ದಿಗ್ಗಜರು, ತೃತೀಯ ಲಿಂಗಿಗಳು, ವಿಶೇಷ ಚೇತನರ ಪ್ರತಿನಿಧಿಗಳನ್ನು ರಾಯಭಾರಿ ಯಾಗಿಸಿಕೊಂಡಿರುವುದು ಮತದಾನ ಜಾಗೃತಿಗೆ ಬಲ ನೀಡಿದೆ ಎಂದರು.

ಎಸ್ಪಿ ರಾಹುಲ್ ಕುಮಾರ್ ಶಹಾಪುರವಾಡ್, ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ, ಸಿಎಓ ನರಸಿಂಹ ಮೂರ್ತಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀ ಧರ್, ರಮೇಶ್, ಸ್ವೀಪ್ ಸಮಿತಿ ಶ್ರೀ ನಿವಾಸ್, ಜಾಹ್ನವಿ , ಇತರ ಅಧಿಕಾರಿಗಳು ಹಾಜರಿದ್ದರು.

Sneha Gowda

Recent Posts

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

54 mins ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

1 hour ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

2 hours ago

ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ

ಮನೆಯ ಹೊರಗೆ ಆಟಾವಾಡುತ್ತಿದ್ದ ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ  ಗ್ಯಾಂಗ್  ಏಕಾಏಕಿ ದಾಳಿ ಮಾಡಿದ ಘಟನೆ ಪಟ್ಟಣದ…

2 hours ago

ಜಿಲ್ಲಾಡಳಿತ ಬೀದರ್ ವತಿಯಿಂದ ಬಸವಣ್ಣ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಬಸವಣ್ಣನವರ ವಿಚಾರಗಳು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಅವು ಇಡೀ ನಮ್ಮ ರಾಷ್ಟ್ರದಾದ್ಯಂತ ಇಂದು ಪ್ರಸ್ತುತ ಇವೆ ಎಂದು ಜಿಲ್ಲಾ…

2 hours ago

ನಟಿ ರೂಪಾ ಅಯ್ಯರ್‌ ಗೆ ಆನ್ ಲೈನ್ ನಲ್ಲಿ ವಂಚನೆ: ಹಣ ದೋಚೋಕೆ ಟ್ರೈ ಮಾಡಿದ ಕಳ್ಳರು

ಸ್ಯಾಂಡಲ್‌ವುಡ್ ನಟಿ, ನಿರ್ದೇಶಕಿ ರೂಪಾ ಅಯ್ಯರ್‌ ಅವರಿಗೆ ಆನ್ ಲೈನ್ ಕಳ್ಳರು ಕಾಟ ಕೊಟ್ಟಿದ್ದಾರೆ. ಸಿಸಿಬಿ ಸಿಸಿಬಿ ಅಧಿಕಾರಿಗಳೆಂದು ಕಾಲ್…

3 hours ago