News Karnataka Kannada
Monday, April 29 2024
ತುಮಕೂರು

ಮೊಂಬತ್ತಿ ಬೆಳಕಲ್ಲಿ ಬೈಕ್​​ಗೆ ಪೆಟ್ರೋಲ್ ಹಾಕುತ್ತಿದ್ದಾಗ ಬೆಂಕಿ ತಗುಲಿ ಬಾಲಕಿ ಸಾವು

Girl dies after fire breaks out while she was putting petrol on her bike under candle light
Photo Credit : News Kannada

ತುಮಕೂರು: ಮೊಂಬತ್ತಿ ಬೆಳಕಲ್ಲಿ ಬೈಕ್​​ಗೆ ಪೆಟ್ರೋಲ್ ಹಾಕುತ್ತಿದ್ದ ಬಾಲಕಿಗೆ ಬೆಂಕಿ ತಗುಲಿ ಸಾವನ್ನಪ್ಪಿದ ಘಟನೆ ಕುಣಿಗಲ್ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಾಲಕಿ ಸೌಂದರ್ಯ (16) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.

ಮನೆಯ ಬೈಕ್ ಗೆ ಪ್ಲಾಸ್ಟಿಕ್ ಬಾಟಲಿ ಮೂಲಕ ಮೊಂಬತ್ತಿ ಹಿಡಿದು ಪೆಟ್ರೋಲ್ ಹಾಕುತ್ತಿದ್ದ ವೇಳೆ ಬೆಂಕಿ ಹೊತ್ತಿಕೊಂಡಿದೆ.

ಸುಟ್ಟಗಾಯದಿಂದ ಅಸ್ವಸ್ಥಳಾದ ಬಾಲಕಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿತ್ತು.  ಆದರೆ ಅಲ್ಲಿ ಚಿಕಿತ್ಸೆ ಫಲಿಸದೆ ಬಾಲಕಿ ಸಾವನ್ನಪ್ಪಿದ್ದಾಳೆ. ಅಮೃತ್ತೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು