News Karnataka Kannada
Tuesday, May 07 2024
ತುಮಕೂರು

ಮತ ಚಲಾಯಿಸಿ ಮನೆಗೆ ಬಂದ ವ್ಯಕ್ತಿಗೆ ದಿಢೀರ್‌ ಹೃದಯಾಘಾತ

ಮತ ಚಲಾಯಿಸಿ ಮನೆಗೆ ಬಂದ ವ್ಯಕ್ತಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ ಘಟನೆ ತುಮಕೂರು ನಗರದ ಎಸ್.ಎಸ್. ಪುರಂನಲ್ಲಿ ನಡೆದಿದೆ.
Photo Credit : NewsKarnataka

ತುಮಕೂರು: ಮತ ಚಲಾಯಿಸಿ ಮನೆಗೆ ಬಂದ ವ್ಯಕ್ತಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ ಘಟನೆ ತುಮಕೂರು ನಗರದ ಎಸ್.ಎಸ್. ಪುರಂನಲ್ಲಿ ನಡೆದಿದೆ.

54 ವರ್ಷದ ರಮೇಶ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಇವರಿಗೆ ತುಮಕೂರು ನಗರದಲ್ಲಿ ಬಟ್ಟೆ ಅಂಗಡಿ ವ್ಯಾಪಾರಿಯಾಗಿದ್ದರು.

ರಮೇಶ್ ಅವರು ಇಂದು ಬೆಳಗ್ಗೆ ತುಮಕೂರು ನಗರದ ಎಸ್.ಎಸ್ ಪುರಂನಲ್ಲಿರುವ ಮತಗಟ್ಟೆಗೆ ತೆರಳಿ, ಎಸ್‌ವಿಕೆ ಸ್ಕೂಲ್‌ನಲ್ಲಿರುವ ಮತಗಟ್ಟೆ ಸಂಖ್ಯೆ 149ರಲ್ಲಿ ಪತ್ನಿಯ ಜೊತೆ ಹೋಗಿದ್ದ ರಮೇಶ್ ಅವರು ಮತ ಚಲಾಯಿಸಿ ಬಂದಿದ್ದರು.

ಬಟ್ಟೆ ವ್ಯಾಪಾರಿ ರಮೇಶ್ ಅವರು ಮತದಾನ ಮುಗಿಸಿ ಮನೆಗೆ ವಾಪಸಾಗುತ್ತಿದ್ದಂತೆ ಹೃದಯಾಘಾತವಾಗಿದೆ. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ರಮೇಶ್ ಅವರು ಬದುಕುಳಿದಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು