ಬೆಂಗಳೂರು: ಆಟೋ ಮೇಲೆ ಕ್ರೇನ್ ಹರಿದ ಪರಿಣಾಮ ಡ್ರೈವರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೌರ್ಯ ಸರ್ಕಲ್ನಲ್ಲಿ ನಡೆದಿದೆ.
ರಸ್ತೆ ಅಪಘಾತಕ್ಕೆ ಆಟೋ ಡ್ರೈವರ್ ವಿನೋದ್ (35) ಬಲಿಯಾಗಿದ್ದಾನೆ. ಬೆಳಿಗ್ಗೆ 6.50ಕ್ಕೆ ಡ್ಯೂಟಿ ಮುಗಿಸಿ ಬಂದು ರಸ್ತೆ ಪಕ್ಕದಲ್ಲಿ ಆಟೋ ಹಾಕಿ ಡ್ರೈವರ್ ಮಲಗಿದ್ದನು. ಆದರೆ ಹಿಂದೆಯಿಂದ ಕ್ರೇನ್ ಆಟೋಗೆ ಗುದ್ದಿದ ಪರಿಣಾಮ ವಿನೋದ್ ತಲೆ ಮೇಲೆ ಕ್ರೇನ್ ಹರಿದು ಆಟೋ ಡ್ರೈವರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

